Select Your Language

Notifications

webdunia
webdunia
webdunia
webdunia

ಕೇಂದ್ರ ಬಜೆಟ್ ನಲ್ಲಿ 'ತೆರಿಗೆ ವಿನಾಯಿತಿ' ಕುರಿತು ಇಲ್ಲಿದೆ ನೋಡಿ ಮಾಹಿತಿ

Budget 2021
ನವದೆಹಲಿ , ಸೋಮವಾರ, 1 ಫೆಬ್ರವರಿ 2021 (12:54 IST)
ನವದೆಹಲಿ : ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರದ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ  ನೇರ ತೆರಿಗೆ ಪದ್ಧತಿಯಲ್ಲಿ ಹಲವು ಸುಧಾರಣೆ ತರಲಾಗಿದೆ.

ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಿಂದ ವಿನಾಯ್ತಿ. 75 ವರ್ಷ ಮೇಲ್ಪಟ್ಟ ವೃದ್ಧರು ಟ್ಯಾಕ್ಸ್ ಕಟ್ಟುವಂತಿಲ್ಲ. ಪೆನ್ಷನ್ ಮತ್ತು ಠೇವಣಿ ಮೇಲೆ ಬಡ್ಡಿ ಪಡೆಯುತ್ತಿರುವವರಿಗೆ ಮಾತ್ರ ರಿಲೀಫ್ ನೀಡಲಾಗಿದೆ.

ಬಾಂಡ್ ಖರೀದಿಯಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ. ರಿಯಲ್ ಎಸ್ಟೇಟ್ ಗೆ ಬಿಗ್ ರಿಲೀಫ್. ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಕಂಪೆನಿಗಳಿಗೆ ತೆರಿಗೆ ವಿನಾಯ್ತಿ. ಮತ್ತೊಂದು ವರ್ಷ ತೆರಿಗೆ ವಿನಾಯ್ತಿ ಘೋಷಿಸಿದ ಕೇಂದ್ರ. ವಿಮಾನಯಾನ ಬಾಡಿಗೆ ನೀಡುವ ಕಂಪೆನಿಗಳಿಗೂ ತೆರಿಗೆ ವಿನಾಯ್ತಿ. ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್. ಗೃಹ ಸಾಲದ ಮೇಲಿನ ತೆರಿಗೆ ವಿನಾಯ್ತಿ 1 ವರ್ಷ ವಿಸ್ತರಣೆ. 5 ಕೋಟಿಯಷ್ಟು  ನಿಧಿ ಸಂಗ್ರಹಿಸುವ ಚಾರಿಟೇಬಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯ್ತಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಬಜೆಟ್ 2021 ಭಾಗ-2 ಮುಖ್ಯಾಂಶಗಳು