Select Your Language

Notifications

webdunia
webdunia
webdunia
webdunia

ವಿಶ್ವಾಸ ಮತ ಗೆದ್ದ ಮನೋಹರ್ ಪರಿಕ್ಕರ್

ವಿಶ್ವಾಸ ಮತ ಗೆದ್ದ ಮನೋಹರ್ ಪರಿಕ್ಕರ್
Panaji , ಗುರುವಾರ, 16 ಮಾರ್ಚ್ 2017 (13:12 IST)
ಪಣಜಿ:  ಮನೋಹರ್ ಪರಿಕ್ಕರ್  48 ಗಂಟೆಗಳ ಮುಖ್ಯಮಂತ್ರಿ ಎಂದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೆ ಮುಖಭಂಗವಾಗಿದೆ. ಗೋವಾದಲ್ಲಿ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಾಸ ಮತ ಗೆದ್ದಿದೆ.

 
ಬಹುಮತ ಸಾಬೀತುಪಡಿಸಲು 22 ಸೀಟುಗಳ ಅಗತ್ಯವಿತ್ತು. ಇಂದು ನಡೆದ ವಿಶ್ವಾಸಮತದಲ್ಲಿ ಬಿಜೆಪಿ ಇತರರ ಸಹಾಯದೊಂದಿಗೆ ಸುಲಭವಾಗಿ ಬಹುಮತ ಸಾಬೀತುಪಡಿಸಿತು. ಇದರೊಂದಿಗೆ ಪರಿಕ್ಕರ್ ನಾಲ್ಕನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಗಟ್ಟಿ ಮಾಡಿಕೊಂಡರು.

ಗೋವಾದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು, ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, 13 ಸ್ಥಾನಗಳನ್ನುಹೊಂದಿದ್ದ ಬಿಜೆಪಿ ಇತರರ ಸಹಾಯದೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?