Select Your Language

Notifications

webdunia
webdunia
webdunia
webdunia

ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?

ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?
ಬೆಂಗಲೂರು , ಗುರುವಾರ, 16 ಮಾರ್ಚ್ 2017 (11:43 IST)
ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ ಘೋಷಿಸಿದ್ದಾರೆ. ಬೆಂಗಳೂರಿನ 198 ವಾರ್ಡ್`ಗಳಲ್ಲಿ 10 ರೂಪಾಯಿಗೆ ಊಟ, 5 ರೂಪಾಯಿಗೆ ತಿಂಡಿ ಕೊಡುವ ಈ ಯೋಜನೆ  ಜನಮೆಚ್ಚುಗೆಗೆ ಪಾತ್ರವಾಗಿದೆ.

ಅಂದಹಾಗೆ, ನಮ್ಮ ಕ್ಯಾಂಟೀನ್ ಊಟ ಸರಬರಾಜಾಗುವುದು ಇಸ್ಕಾನ್ ಸಂಸ್ಥೆಯಿಂದ. ಈ ಬಗ್ಗೆ ಇಸ್ಕಾನ್ ಜೊತೆ ಒಂದು
ಸುತ್ತಿನ ಮಾತುಕತೆ ನಡೆಸಿರುವ ಸರ್ಕಾರ ಅಕ್ಷಯ ಪಾತ್ರೆ ಯೋಜನೆಯಡಿ ನಮ್ಮ ಕ್ಯಾಂಟೀನ್`ಗೂ ಊಟದ ಸಪ್ಲೈ ಮಾಡಲಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಇಸ್ಕಾನ್ ಉತ್ಕೃಷ್ಟ ಆಹಾರ ನೀಡುತ್ತಿದೆ. ಹೀಗಾಗಿಯೇ, ಇದೇ ಉತ್ತಮ ಕ್ವಾಲಿಟಿಯ ಆಹಾರವನ್ನೂ ನಮ್ಮ ಕ್ಯಾಂಟಿನ್`ಗಳಲ್ಲಿ ಒದಗಿಸುವುದು ಸರ್ಕಾರದ ಉದ್ದೇಶ. ಬಿಬಿಎಂಪಿ ನೆರವಿನ ಮೂಲಕ ಜಾಗ ಪಡೆದು ನಮ್ಮ ಕ್ಯಾಂಟಿನ್ ತೆರೆದು ಇಸ್ಕಾನ್ ಸಂಸ್ಥೆಯಿಂದ ಬರುವ ಊಟವನ್ನ ಇಲ್ಲಿ ನೀಡಲಾಗುತ್ತದೆ.

ಪ್ರತಿನಿತ್ಯ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಒಂದು ತಿಂಗಳೊಳಗೆ ಯೊಜನೆ ಜಾರಿಗೆ ಬರಲಿದೆ.ಇಸ್ಕಾನ್`ಗೆ ಪ್ರತಿ ಊಟಕ್ಕೆ 20 ರೂ. ವನ್ನ ಸರ್ಕಾರ ನೀಡಲಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್ ಸಿಎಂ ಆಗಿ ಅಮರೀಂದರ್ ಸಿಂಗ್ ಪದಗ್ರಹಣ