Select Your Language

Notifications

webdunia
webdunia
webdunia
webdunia

ಮಣಿಪುರದಲ್ಲಿ ಮೊದಲ ಹಂತ, ಯುಪಿಯಲ್ಲಿ 6ನೇ ಹಂತದ ಚುನಾವಣೆ

ಮಣಿಪುರದಲ್ಲಿ ಮೊದಲ ಹಂತ, ಯುಪಿಯಲ್ಲಿ 6ನೇ ಹಂತದ ಚುನಾವಣೆ
ಇಂಫಾಲ್ , ಶನಿವಾರ, 4 ಮಾರ್ಚ್ 2017 (09:15 IST)
ಈಶಾನ್ಯ ರಾಜ್ಯಗಳಲ್ಲೊಂದಾದ ಮಣಿಪುರದಲ್ಲಿ ಇಂದು ಮೊದಲ ಹಂತದ ಮತ್ತು ಉತ್ತರ ಪ್ರದೇಶದಲ್ಲಿ 6ನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ.
ಮಣಿಪುರದ 5 ಜಿಲ್ಲೆಗಳ 38 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಒಟ್ಟು 1643 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ವಿಷ್ಣುಪುರ, ಚುಡಾಚಂದಾಪುರ, ಕಾಂಗಪೊಕಪಿ ಜಿಲ್ಲೆಗಳಲ್ಲಿ ಇಂದು ಮುಂಜಾನೆಯಿಂದಲೇ ಮತದಾನ ಆರಂಭವಾಗಿದೆ.
 
168 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು, 19,02,562 ಮತದಾರರಿದ್ದು, ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ.
 
ಇನ್ನು ಉತ್ತರ ಪ್ರದೇಶದಲ್ಲಿ 6 ನೇ ಹಂತದ ಚುನಾವಣೆ ನಡೆಯುತ್ತಿದ್ದು ಖುಶಿನಗರ, ಗೋರಕ್ಪುರ ಸೇರಿದಂತೆ 7 ಜಿಲ್ಲೆಗಳಲ್ಲಿ ಮುಂಜಾನೆ 6 ಗಂಟೆಯಿಂದ ಜನರು ಮತ ಚಲಾಯಿಸುತ್ತಿದ್ದಾರೆ.
 
49 ಕ್ಷೇತ್ರಗಳಿಗೆ ಸ್ಪರ್ಧೆ ನಡೆಯುತ್ತಿದ್ದು. 635 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.72 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದು, 17,926 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
 
ಮಾರ್ಚ್ 8 ರಂದು ಮಣಿಪುರದಲ್ಲಿ 2ನೇ ಹಂತದ ಮತ್ತು ಉತ್ತರ ಪ್ರದೇಶದಲ್ಲಿ 7ನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 12ಕ್ಕೆ ಫಲಿತಾಂಶ ಹೊರಬೀಳಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಬಿಐ ಅಕೌಂಟಿನಲ್ಲಿ ದುಡ್ಡಿಲ್ಲವೇ? ದಂಡ ತೆರಲು ಸಿದ್ಧರಾಗಿ!