Select Your Language

Notifications

webdunia
webdunia
webdunia
webdunia

ತಾಯಿ ಮೇಲಿನ ದ್ವೇಷಕ್ಕೆ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ಅರೆಸ್ಟ್

ತಾಯಿ ಮೇಲಿನ ದ್ವೇಷಕ್ಕೆ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ಅರೆಸ್ಟ್
ಮಹಾರಾಷ್ಟ್ರ , ಸೋಮವಾರ, 18 ಫೆಬ್ರವರಿ 2019 (11:46 IST)
ಮಹಾರಾಷ್ಟ್ರ : ವ್ಯಕ್ತಿಯೊಬ್ಬ ತಾಯಿಯ ಮೇಲಿನ ಸೇಡಿಗೆ  4 ವರ್ಷದ ಮಗಳ  ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.

ಆರೋಪಿ ಹಾಗೂ ಮೃತ ಬಾಲಕಿ ತಂದೆ ಸ್ನೇಹಿತರಾಗಿದ್ದ ಕಾರಣ ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ ಆತ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ್ದ. ಒಮ್ಮೆ ಸ್ನೇಹಿತನ ಪತ್ನಿಯ ಬಳಿ ಆತ ಒಂದು ರಾತ್ರಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಆತನಿಗೆ ಅವಮಾನ ಮಾಡಿದ್ದಳಂತೆ.

 

ಆಕೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಆತ ಆಕೆಯ ಮಗಳಿಗೆ ಚಾಕೋಲೇಟ್ ಕೊಡುವ ನೆಪ ಹೇಳಿ ಮನೆಗೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾನೆ.  ಮಗಳನ್ನು ಹುಡುಕುತ್ತ ಮಹಿಳೆ ಈತನ ಮನೆಗೆ ಬಂದಾಗ ಆತನ ನೀಚ ಕೃತ್ಯ ಕಂಡು ದಂಗಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಭಾರತ ಸರ್ಕಾರ ಪಾಕ್ ನ ಗುರಿಮಾಡುವುದು ತಪ್ಪು- ಕಾಂಗ್ರೆಸ್ ವಕ್ತಾರನ ವಿವಾದಾತ್ಮಕ ಹೇಳಿಕೆ