Publish Date: Thu, 09 Jun 2022 (09:20 IST)
Updated Date: Thu, 09 Jun 2022 (09:34 IST)
ಪಾಟ್ನಾ: ನಮ್ಮ ದೇಶದಲ್ಲಿ ರೈಲಿನ ಮೇಲೆ ಕೂತು ಚಲಿಸಿದ ನಿದರ್ಶನಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ರೈಲಿನ ಎಂಜಿನ್ ಕೆಳಗೆ ಕೂತು 19 ಕಿ.ಮೀ. ಸಂಚರಿಸಿ ಎಲ್ಲರೂ ಅವಾಕ್ಕಾಗುವಂತೆ ಮಾಡಿದ್ದಾನೆ.
ಬಿಹಾರದ ಪಾಟ್ನಾಗೆ ತೆರಳುವ ರೈಲಿನಲ್ಲಿ ರಾಜ್ ಗಿರ್ ನಿಂದ ಗಯಾವರೆಗೆ ಓರ್ವ ವ್ಯಕ್ತಿ ರೈಲ್ವೇ ಇಂಜಿನ್ ನ ಕೆಳಗೆ ಚಕ್ರದಿಂದ ಕೊಂಚ ಮೇಲೆ ಇರುವ ಕಡಿದಾದ ಜಾಗದಲ್ಲಿ ಕೂತು ಪ್ರಯಾಣ ಮಾಡಿದ್ದಾನೆ.
ಗಯಾ ಜಂಕ್ಷನ್ ನಲ್ಲಿ ರೈಲು ನಿಂತಾಗ ರೈಲಿನ ಸಿಬ್ಬಂದಿಗೆ ನೀರು ಕೇಳಿದ್ದಾನೆ. ಆಗಲೇ ಎಂಜಿನ್ ಕೆಳಗೆ ಒಬ್ಬ ವ್ಯಕ್ತಿ ಇದ್ದಾನೆಂದು ಅಲ್ಲಿದ್ದ ಅಧಿಕಾರಿಗಳಿಗೆ ತಿಳಿದಿದೆ. ಇದರಿಂದ ಗಾಬರಿಗೊಂಡ ಅವರು ತಕ್ಷಣವೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯಿಂದ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಇದೀಗ ಆ ವ್ಯಕ್ತಿ ಅಲ್ಲಿ ಹೋಗಿ ಕೂತಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.