ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಲೆಪ್ಟಿನೆಂಟ್ ಗವರ್ನರ್ ಕಚೇರಿಗೆ ಭೇಟಿ ನೀಡಲು ಬಂದಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ಇಂಕ್ ಎಸೆದ ಘಟನೆ ವರದಿಯಾಗಿದೆ.
ದೆಹಲಿಯಲ್ಲಿ ಚಿಕನ್‌ಗುನ್ಯಾ ಮತ್ತು ಡೆಂಘಿ ಜ್ವರಗಳಿಂದ ರೋಗಿಗಳು ತತ್ತರಿಸಿರುವಾಗ ಸಿಸೋಡಿಯಾ ಫಿನ್‌ಲ್ಯಾಂಡ್‌ಗೆ ತೆರಳಿರುವುದರ ವಿರುದ್ಧ ವ್ಯಕ್ತಿ ಅಸಮಾಧಾನಗೊಂಡಿದ್ದ ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿ ಸಿಸೋಡಿಯಾ ಕಾರಿನಲ್ಲಿ ಕುಳಿತು ಹೊರಡುತ್ತಿರುವ ಸಂದರ್ಭದಲ್ಲಿ ಬ್ರಿಜೇಶ್ ಶುಕ್ಲಾ ಎನ್ನುವ ವ್ಯಕ್ತಿ ಸಿಸೋಡಿಯಾ ಮುಖದ ಮೇಲೆ ಇಂಕ್ ಸಿಡಿಸಿದ್ದಾನೆ.
ಮುಖದ ಮೇಲೆ ಬಿದ್ದ ಇಂಕ್ ಒರೆಸಿಕೊಂಡ ಸಿಸೋಡಿಯಾ, ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಕೊಳಕು ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಚಿಕನ್‌ಗುನ್ಯಾ ಮತ್ತು ಡೆಂಘಿ ಜ್ವರಗಳಿಂದ ರೋಗಿಗಳು ತತ್ತರಿಸಿರುವಾಗ ಸಿಸೋಡಿಯಾ ಫಿನ್‌ಲ್ಯಾಂಡ್‌ಗೆ ತೆರಳಿರುವುದರ ವಿರುದ್ಧ ವ್ಯಕ್ತಿ ಅಸಮಾಧಾನಗೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ದೆಹಲಿ ಸರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಆಯಾಮ ತರಲು ಬದ್ಧವಾಗಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಇಂಕ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಎರಡೂ ಪಕ್ಷಗಳು ದೆಹಲಿ ನಾಗರಿಕರಿಗೆ ಒಳ್ಳೆಯದು ಬಯಸುತ್ತಿಲ್ಲ. ಉಭಯ ಪಕ್ಷಗಳ ಮುಖ್ಯ ಉದ್ದೇಶ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವಂತಹ ಕೊಳಕು ರಾಜಕಾರಣ ಮಾಡುತ್ತಿವೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ