Select Your Language

Notifications

webdunia
webdunia
webdunia
webdunia

73ನೇ ದಿನವೂ ಕಾಶ್ಮಿರ ಕಣಿವೆ ಬಂದ್‌

73ನೇ ದಿನವೂ ಕಾಶ್ಮಿರ ಕಣಿವೆ ಬಂದ್‌
ಶ್ರೀನಗರ್ , ಸೋಮವಾರ, 19 ಸೆಪ್ಟಂಬರ್ 2016 (17:11 IST)
ಕಾಶ್ಮಿರ ಕಣಿವೆ ಸತತ 73ನೇ ದಿನವೂ ಸ್ಥಬ್ಧವಾಗಿದ್ದು ಶ್ರೀನಗರದಲ್ಲೂ ಕರ್ಫ್ಯೂ ಹೇರಲಾಗಿದೆ. ಪುಲ್ವಾಮಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕತಾವಾದಿಗಳು ಪ್ರತಿಭಟನೆ ಆರಂಭಿಸಿದ್ದರಿಂದ, ಮತ್ತೆ ಹಿಂಸಾಚಾರ ಉಲ್ಭಣವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.  
 
ನಿನ್ನೆ ರಾತ್ರಿ ಅನಂತನಾಗ್ ಜಿಲ್ಲೆಯ ಪಿಡಿಪಿ ಅಧ್ಯಕ್ಷನ ನಿವಾಸಕ್ಕೆ ನುಗ್ಗಿದ ಉಗ್ರರು ಭದ್ರತಾ ಸಿಬ್ಬಂದಿಗಳ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾದ ಘಟನೆ ವರದಿಯಾಗಿದೆ. 
 
ಕಾಶ್ಮಿರ ಕಣಿವೆಯಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ, ಸಾರಿಗೆ ವ್ಯವಸ್ಥೆ ಮತ್ತು ಇತರ ವಹಿವಾಟು ಸ್ಥಗಿತಗೊಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಕಾಶ್ಮಿರದಲ್ಲಿ ಜುಲೈ 9 ರಿಂದ ಆರಂಭವಾದ ಹಿಂಸಾಚಾರದಿಂದ 86 ನಾಗರಿಕರು ಮತ್ತು ಮೂವರು ಪೊಲೀಸರು ಸೇರಿದಂತೆ 89 ಮಂದಿ ಸಾವನ್ನಪ್ಪಿದ್ದಾರೆ. 11,500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಟೋಗೆ ಡಿಕ್ಕಿ: ಅಟೋ ಚಾಲಕನ ಸಾವು