Select Your Language

Notifications

webdunia
webdunia
webdunia
webdunia

ಪತ್ನಿಯನ್ನಿಟ್ಟುಕೊಂಡ ಶಂಕೆ; ಚಡ್ಡಿದೋಸ್ತ್‌ನ್ನೇ ಶೂಟ್ ಮಾಡಿದ

ಪತ್ನಿಯನ್ನಿಟ್ಟುಕೊಂಡ ಶಂಕೆ; ಚಡ್ಡಿದೋಸ್ತ್‌ನ್ನೇ ಶೂಟ್ ಮಾಡಿದ
ನವದೆಹಲಿ , ಶುಕ್ರವಾರ, 16 ಸೆಪ್ಟಂಬರ್ 2016 (16:29 IST)
ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಲ್ಲಿ  ಮಾಜಿ ಸಿಆರ್‌ಪಿಎಫ್ ಪೇದೆಯೊಬ್ಬ ತನ್ನ ಸ್ನೇಹಿತನಿಗೆ ಶೂಟ್ ಮಾಡಿದ ಹೇಯ ಘಟನೆ ನವದೆಹಲಿಯಲ್ಲಿ ನಡೆದಿದೆ.

ಆರೋಪಿಯನ್ನು ಕೇತನ್ ಯಾದವ್ ಎಂದು ಗುರುತಿಸಲಾಗಿದ್ದು, ಸೋಮವಾರ ಮುಂಜಾನೆ 8 ಗಂಟೆ ಸುಮಾರಿಗೆ ಆತ ತನ್ನ ಸ್ನೇಹಿತ ವಿಜಯ್ ವರ್ಮಾನನ್ನು ಶೂಟ್ ಮಾಡಿದ್ದಾನೆ. ಶರ್ಮಾ ಅತ್ತಿಗೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ಮೂರು ಬಾರಿ ಗುಂಡು ಹಾರಿಸಲಾಗಿದೆ ಎಂದು ಡಿಸಿಪಿ ಸುರೇಂದರ್ ಕುಮಾರ್ ತಿಳಿಸಿದ್ದಾರೆ. 
 
ವರ್ಮಾ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು ಆತನ ಬಳಿ ಇದ್ದ ರಿವಾಲ್ವರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ. 
 
ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 2003ರಲ್ಲಿ ಸಿಆರ್‌ಪಿಎಫ್ ಸೇರಿದ್ದ ಆತ ಪತ್ನಿಯೊಂದಿಗಿನ ಹಳಸಿದ ಸಂಬಂಧಕ್ಕೆ ನೊಂದು 2014ರಲ್ಲಿ ರಾಜೀನಾಮೆ ಸಲ್ಲಿಸಿದ್ದ. 
 
ವರ್ಮಾ ಬಾಲ್ಯ ಸ್ನೇಹಿತನಾಗಿದ್ದು ನನ್ನ ಪತ್ನಿ ಜತೆ ಸಲುಗೆಯಿಂದಿದ್ದದ್ದ. ಹೀಗಾಗಿಯೇ ನಮ್ಮಿಬ್ಬರ ನಡುವೆ ವಿಚ್ಛೇದನವಾಯ್ತು. ಅದೇ ಕೋಪದಲ್ಲಿ ಆತನನ್ನು ಕೊಲ್ಲಲೆತ್ನಿಸಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
 
ವಿಚ್ಛೇದನದ ಬಳಿಕ ವರ್ಮಾ ಮರುಮದುವೆಯಾದ. ಆದರೆ ತನ್ನ ಪತ್ನಿ ಮತ್ತು ಸ್ನೇಹಿತನ ವಿರುದ್ಧ ದ್ವೇಷವನ್ನು ಮಾತ್ರ ಬಿಡದಾದ. ಹೀಗಾಗಿ ಆತ ಅವರಿಬ್ಬರ ಕೊಲೆಗೆ ಯೋಜಿಸಿದ. ಆದರೆ ಪತ್ನಿಯ ಮೇಲೆ ದಾಳಿ ಮಾಡುವ ಮೊದಲೇ ಸಿಕ್ಕಿ ಹಾಕಿಕೊಂಡಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯರನ್ನು ಮರಕ್ಕೆ ಕಟ್ಟಿ ಸ್ನೇಹಿತೆಯರ ಮೇಲೆ ಐವರಿಂದ ಗ್ಯಾಂಗ್ ರೇಪ್