Select Your Language

Notifications

webdunia
webdunia
webdunia
webdunia

ಗೆಳೆಯರನ್ನು ಮರಕ್ಕೆ ಕಟ್ಟಿ ಸ್ನೇಹಿತೆಯರ ಮೇಲೆ ಐವರಿಂದ ಗ್ಯಾಂಗ್ ರೇಪ್

Two teenage girls
ನವದೆಹಲಿ , ಶುಕ್ರವಾರ, 16 ಸೆಪ್ಟಂಬರ್ 2016 (16:27 IST)
ರಾಷ್ಟ್ರರಾಜಧಾನಿ ಮತ್ತೊಂದು ಹೈಯ ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಇಬ್ಬರು ಹದಿ ಹರೆಯದ ಯುವತಿಯರ ಮೇಲೆ ಬರೊಬ್ಬರಿ ಐವರು ಯುವಕರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ದೆಹಲಿಯ ಅಮಾನ್ ವಿಹಾರ್ ಪ್ರದೇಶದಲ್ಲಿ ಈ ಕರಾಳ ಘಟನೆ ನಡೆದಿದೆ. 

ದೊರೆತಿರುವ ಮಾಹಿತಿಗಳ ಪ್ರಕಾರ , ಹದಿಹರೆಯದ ಯುವತಿಯರು ತಮ್ಮ ಪುರುಷ ಸ್ನೇಹಿತರ ಜತೆ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಸರ್ಕಾರಿ ಉದ್ಯಾನವನಕ್ಕೆ ಭೇಟಿ ನೀಡಿದ್ದರು. 
 
ಈ ಸಮಯದಲ್ಲಿ ಪಾರ್ಕ್ ಮುಂದೆ ಇದ್ದ ಖಾಲಿ ಬಯಲಿನಲ್ಲಿ ಹಾದು ಹೋಗುತ್ತಿದ್ದ ಐವರು ದುರುಳರು ಯುವತಿಯರನ್ನು ಕಂಡು ಆತ್ಯಾಚಾರವೆಸಗುವ ಕುತಂತ್ರ ರೂಪಿಸಿದ್ದಾರೆ.
 
ತಕ್ಷಣ ಪಾರ್ಕ್ ಒಳಕ್ಕೆ ಬಂದ ಅವರು ಯುವತಿಯರ ಜತೆ ಕೆಟ್ಟದಾಗಿ ವರ್ತಿಸಲು ಆರಂಭಿಸಿದ್ದಾರೆ. ಅವರ ಪುರುಷ ಸ್ನೇಹಿತರು ಅದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಾಗ ಅವರನ್ನು ಮರಕ್ಕೆ ಕಟ್ಟಿ ಹಾಕಿದ ಅವರು ಹುಡುಗಿಯರನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಗೆಳೆಯರ ಮಾಹಿತಿಯ ಮೇಲೆ ಪೊಲೀಸರು ಅಲ್ಲಿಗೆ ಬಂದಾಗ ಯುವತಿಯರಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 
 
ಪೀಡಿತರು 17 ರಿಂದ 18 ವರ್ಷದ ಒಳಗಿನವರು ಎಂದು ತಿಳಿದು ಬಂದಿದೆ. ಅವರಿಬ್ಬರು ಸ್ನೇಹಿತೆಯರಾಗಿದ್ದು ಶೂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 
 
ತತ್‌ಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅರುಣಾಚಲ: ಕಾಂಗ್ರೆಸ್ ಸಿಎಂ ಸೇರಿ 43 ಶಾಸಕರು ಬಿಜೆಪಿ ಮೈತ್ರಿಕೂಟಕ್ಕೆ