Webdunia - Bharat's app for daily news and videos

Install App

ಗೆಳತಿಯನ್ನು ಕೊಂದು 8 ತಿಂಗಳಿನಿಂದ ಫ್ರಿಡ್ಜ್ ನಲ್ಲಿಟ್ಟಿದ್ದ ಭೂಪ: ಬೆಚ್ಚಿಬೀಳಿಸುವ ಘಟನೆ ವಿವರ ಇಲ್ಲಿದೆ

Krishnaveni K
ಶನಿವಾರ, 11 ಜನವರಿ 2025 (13:12 IST)
ಭೋಪಾಲ್: ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ ಗೆಳತಿ ಮದುವೆಗೆ ಒತ್ತಾಯಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಕೆಯನ್ನು ಕೊಂದು ಕಳೆದ 8 ತಿಂಗಳಿನಿಂದ ಫ್ರಿಡ್ಜ್ ನಲ್ಲಿಟ್ಟಿದ್ದ ಬೆಚ್ಚಿ ಬೀಳಿಸುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಸಂಜಯ್ ಪಾಟಿದಾರ್ ಎಂಬ ಆರೋಪಿ ತನ್ನ ಪಿಂಕಿ ಎನ್ನುವ ಗೆಳತಿಯನ್ನು ಕೊಲೆ ಮಾಡಿ ಸೀರೆ, ಆಭರಣ ಸಮೇತ ಫ್ರಿಡ್ಜ್ ನಲ್ಲಿಟ್ಟಿದ್ದ. ಶವ ಕೊಳೆತ ಸ್ಥಿತಿಯಲ್ಲಿದ್ದುದನ್ನು ನೋಡಿದ ಪೊಲೀಸರು ಕಳೆದ ಜೂನ್ ನಲ್ಲೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ 5 ವರ್ಷಗಳಿಂದ ಪಿಂಕಿ ಜೊತೆ ಆರೋಪಿ ಲಿವ್ ಇನ್ ಸಂಬಂಧ ಹೊಂದಿದ್ದ. ಈ ವೇಳೆ ಇಬ್ಬರೂ ದೈಹಿಕವಾಗಿಯೂ ಒಂದಾಗಿದ್ದರು. ಇತ್ತೀಚೆಗೆ ಪಿಂಕಿ ಮದುವೆಯಾಗುವಂತೆ ಆರೋಪಿಯನ್ನು ಒತ್ತಾಯಿಸುತ್ತಿದ್ದಳು.  ಇದರಿಂದ ಸಿಟ್ಟಿಗೆದ್ದಿದ್ದ ಆರೋಪಿ ಕೊಲೆಗೆ ಸ್ಕೆಚ್ ಹಾಕಿದ್ದ.


ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಗೆಳತಿಯನ್ನು ಕೊಂದು ಫ್ರಿಡ್ಜ್ ನಲ್ಲಿಟ್ಟು ಆರೋಪಿ ಮನೆ ಖಾಲಿ ಮಾಡಿದ್ದಾನೆ. ಕೆಲವು ದಿನಗಳಿಂದ ಮನೆಯಿಂದ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಶಂಕೆಗೊಂಡ ನೆರೆಹೊರೆಯವರು ಮನೆ ಮಾಲಿಕರಿಗೆ ತಿಳಿಸಿದ್ದರು. ಬಂದು ನೋಡಿದಾಗ ಫ್ರಿಡ್ಜ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಪ್ರಕರಣ, ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು ನೆನಪಿಸುವಂತೆಯೇ ಇದೆ ಈ ಪ್ರಕರಣ. ಇದೀಗ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡೇಟಾ ನೆಟ್‌ವರ್ಕ್‌ ಸ್ಥಗಿತ: ಮುಂಬೈ ವಿಮಾನ ಹಾರಾಟದಲ್ಲಿ ಕೆಲ ವ್ಯತ್ಯ‌ಯ

ರಾಹುಲ್ ಭಾಷಣ ಶಿವಕಾಶಿಯಿಂದ ತಂದು ಮಳೆಯಲ್ಲಿ ನೆನೆದ ಟುಸ್ ಪಟಾಕಿ: ಸುರೇಶ್ ಕುಮಾರ್ ವ್ಯಂಗ್ಯ

ನಾಳೆ ರಾಜ್ಯಕ್ಕೆ ಮೋದಿ, ಹೇಗಿರಲಿದೆ ಗೊತ್ತಾ ಪ್ರಧಾನಿ ವೇಳಾಪಟ್ಟಿ

2ತಿಂಗ್ಳ ಬಳಿಕ ಮತ್ತೇ ಸಮುದ್ರಕ್ಕಿಳಿದ ಬೋಟ್‌ಗಳು, ವಾರದ ನಂತರ ಮೀನಿನ ಬೆಲೆಯಲ್ಲಿ ಇಳಿಕೆ ಸಾಧ್ಯತೆ

ಲೋಕಸಭೆ ಚುನಾವಣೆಯಲ್ಲಿ ನಡೆದ ಮತಗಳ್ಳತನದ ತನಿಖೆ ನಡೆಸುತ್ತೇವೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments