Select Your Language

Notifications

webdunia
webdunia
webdunia
webdunia

‘ಚಮ್ಮಕ್ ಚಲೋ’ ಎಂದು ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಈತನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

‘ಚಮ್ಮಕ್ ಚಲೋ’ ಎಂದು ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಈತನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?
ನವದೆಹಲಿ , ಮಂಗಳವಾರ, 5 ಸೆಪ್ಟಂಬರ್ 2017 (08:15 IST)
ನವದೆಹಲಿ: ಆತ ಮಾಡಿದ ತಪ್ಪು ಏನು ಗೊತ್ತಾ? ಜಗಳವಾಡುವಾಗ ಓರ್ವ ಮಹಿಳೆಯನ್ನು ಚಮ್ಮಕ್ ಚಲೋ ಎಂದು ಕರೆದಿದ್ದ. ಅಷ್ಟಕ್ಕೇ ಆತ ಇದೀಗ ಜೈಲು ಸೇರುವಂತಾಗಿದೆ.

 
ಘಟನೆ ಏನು? ಇದು ನಡೆದಿರುವುದು ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರು ಪತಿ ಜತೆ ವಾಕಿಂಗ್ ಮುಗಿಸಿ ಬರುವಾಗ  ಅಕಸ್ಮಾತ್ತಾಗಿ ಮೆಟ್ಟಿಲಲ್ಲಿ ಇಟ್ಟಿದ್ದ ಕಸದ ಬುಟ್ಟಿಯ ಮೇಲೆ ಬೀಳುತ್ತಾರೆ. ಈ ವಿಚಾರವಾಗಿ ಕಸದ ಬುಟ್ಟಿ ಇಟ್ಟ ವ್ಯಕ್ತಿ ಮತ್ತು ಮಹಿಳೆ ನಡುವೆ ವಾಗ್ವಾದ ನಡೆಯುತ್ತದೆ. ಈ ಸಂದರ್ಭದಲ್ಲಿ ಆಪಾದಿತ ಮಹಿಳೆಯನ್ನು ಚಮಕ್ ಚಲೋ (ಸೆಕ್ಸಿ ಮಹಿಳೆ ಎಂಬರ್ಥದ ಹಿಂದಿ ಶಬ್ಧ) ಎನ್ನುತ್ತಾನೆ.

ಕೋಪಗೊಂಡ ಮಹಿಳೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಾರೆ. ಆದರೆ ಪೊಲೀಸರು ದೂರು ತೆಗೆದುಕೊಳ್ಳುವುದಿಲ್ಲ. ಕೊನೆಗೆ ಈಕೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇಷ್ಟೆಲ್ಲಾ ನಡೆದಿರುವುದು 2009 ರಲ್ಲಿ.

ಇದೀಗ ನ್ಯಾಯಾಲಯ ತನ್ನ ತೀರ್ಪು ನೀಡಿದ್ದು, ಆಪಾದಿತನಿಗೆ ಮಹಿಳೆಯ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ ತಪ್ಪಿಗೆ ಸರಳ ಜೈಲು ಶಿಕ್ಷೆ ಮತ್ತು 1 ರೂ. ದಂಡ ವಿಧಿಸಿದೆ.

ಇದನ್ನೂ ಓದಿ.. ಹಲ್ಲು ಹಳದಿಗಟ್ಟಿದೆಯೇ? ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ ಇದನ್ನು ಟ್ರೈ ಮಾಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಮಂಗಳೂರು ಚಲೋ: ಬೈಕ್ ಜಾಥಾಗೆ ಅನುಮತಿ ನಿರಾಕರಣೆ