Daily Horoscope
✕

ಹತ್ತಲು ಹೋಗಿ ಬಿದ್ದ ಯುವಕನನ್ನು ಮಾರು ದೂರ ಎಳೆದುಕೊಂಡು ಹೋದ ರೈಲು: ಕೊನೆಗೆ ಏನಾಯ್ತು video

ಕೃಷ್ಣವೇಣಿ ಕೆ
ಬುಧವಾರ, 5 ಆಗಸ್ಟ್ 2026 (11:48 IST)
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ತೀವ್ರ ಆಘಾತವನ್ನುಂಟು ಮಾಡಿದ್ದು, ಸಾರ್ವಜನಿಕರ ಮಾನವೀಯತೆಯನ್ನೇ ಪ್ರಶ್ನೆ ಮಾಡುವಂತಿದೆ. ಚಲಿಸುವ ರೈಲನ್ನು ಹತ್ತಲು ಯತ್ನಿಸಿದ ಯುವಕನೊಬ್ಬ ಆಯತಪ್ಪಿ ಜಾರಿ ಬಿದ್ದು, ರೈಲಿನಲ್ಲೇ ನೇತಾಡುತ್ತಾ ದಾರುಣವಾಗಿ ಜೀವ ಕಳೆದುಕೊಂಡ ಭೀಕರ ದೃಶ್ಯಾವಳಿಗಳು ಸೆರೆಯಾಗಿವೆ.

ರೈಲು ಹತ್ತಲು ಯತ್ನಿಸಿದಾಗ ಅವಘಡ: ವೇಗವಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಯುವಕನ ಕಾಲು ಜಾರಿ, ಆತ ಗೇಟ್‌ನ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಭಯದಿಂದ ತೂಗಾಡಲು ಪ್ರಾರಂಭಿಸಿದ್ದಾನೆ.

ಸಹಾಯಕ್ಕಾಗಿ ಜೀವಭಯದ ಕಿರುಚಾಟ: ಆ ಯುವಕ ತನ್ನ ಪ್ರಾಣ ಉಳಿಸಿಕೊಳ್ಳಲು ಅರಚುತ್ತಾ, ಸಹಾಯಕ್ಕಾಗಿ ಕಣ್ಣೀರಿಡುತ್ತಿದ್ದರೂ ರೈಲಿನ ಬಾಗಿಲಲ್ಲಿದ್ದ ಸವಾರರು ಯಾರೂ ಆತನಿಗೆ ಕೈ ಕೊಟ್ಟು ಎಳೆಯಲು ಮುಂದಾಗಲಿಲ್ಲ.

ಕ್ಯಾಮೆರಾದಲ್ಲಿ ದೃಶ್ಯ ಸೆರೆಹಿಡಿದ ಪ್ರಯಾಣಿಕರು: ಇಬ್ಬದಿ ಹಾಗೂ ಒಳಭಾಗದಲ್ಲಿದ್ದ ಜನರು ತಕ್ಷಣವೇ ರೈಲಿನ ಆಪರ್ಜನ್ಸಿ ಚೈನ್ ಎಳೆದು ರೈಲು ನಿಲ್ಲಿಸುವ ಬದಲು, ತಮ್ಮ ಮೊಬೈಲ್‌ಗಳಲ್ಲಿ ಈ ಭೀಕರ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಸತತವಾಗಿ ಹೋರಾಡಿದರೂ ಪ್ಲಾಟ್‌ಫಾರ್ಮ್ ಹಾಗೂ ಕಂಬಗಳಿಗೆ ಸಿಲುಕಿ ಆತ ರೈಲಿನ ಅಡಿಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. 

ಈ ವೈರಲ್ ವಿಡಿಯೋ ನೋಡಿದ ಸಾರ್ವಜನಿಕರು ಹಾಗೂ ನೆಟ್ಟಿಗರು ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಬದುಕಿಗಾಗಿ ಹೋರಾಡುತ್ತಾ ಕಣ್ಣೆದುರೇ ಪ್ರಾಣ ಬಿಡುತ್ತಿದ್ದರೂ, ಸಹಾಯ ಮಾಡುವ ಬದಲು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಚಿತ್ರೀಕರಿಸುವುದು ಮನುಷ್ಯತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

pic.twitter.com/80eOjIUXm6

 

— Journalist Fatima ✍️ (@mahsharfatima86) August 4, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments