Publish Date: Wed, 01 Nov 2017 (08:44 IST)
Updated Date: Wed, 01 Nov 2017 (08:46 IST)
ನವದೆಹಲಿ: ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ಕೆಲವರು ಡೈಲಾಗ್ ಬಿಡುತ್ತಾರೆ. ಆದರೆ ಈ ಭೂಪ ಮಾತಿನಲ್ಲಿ ಮಾತ್ರವಲ್ಲ, ದುಸ್ಸಾಹಸವನ್ನೇ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
ಮುಂಬೈ ಮೂಲದ ಚಿನ್ನದ ವ್ಯಾಪಾರಿಯಾಗಿರುವ ಈತ ಕೋಟ್ಯಾಧಿಪತಿ. ಆತ ಪ್ರೀತಿಸುತ್ತಿದ್ದ ಹುಡುಗಿ ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲಸ ಬಿಟ್ಟು ತನ್ನೊಂದಿಗೆ ಮುಂಬೈನಲ್ಲಿ ಬಂದು ನೆಲೆಸುವಂತೆ ಮಾಡಲು ಈ ವ್ಯಕ್ತಿ ನಾಟಕವನ್ನೇ ಮಾಡಿದ.
ಭಾನುವಾರ ಮುಂಬೈನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ ವಿಮಾನದ ಟಾಯ್ಲೆಟ್ ನಲ್ಲಿ ಬಾಂಬ್ ಬೆದರಿಕೆ ಚೀಟಿ ಇಟ್ಟು ವಿಮಾನ ತುರ್ತು ಭೂ ಸ್ಪರ್ಶ ಮಾಡುವಂತೆ ಮಾಡಿದ್ದ. ಹಾಗಾದರೂ ತನ್ನ ಪ್ರೇಯಸಿ ಕೆಲಸ ಬಿಟ್ಟು ಬರಲಿ ಎನ್ನುವುದು ಈತನ ಉದ್ದೇಶವಾಗಿತ್ತಂತೆ. ಆದರೆ ಏನೋ ಮಾಡಲು ಹೋಗಿ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ