Publish Date: Thu, 23 Jun 2022 (09:40 IST)
Updated Date: Thu, 23 Jun 2022 (09:55 IST)
ನವದೆಹಲಿ: ಪತ್ನಿಗೆ ಕಿಸ್ ಮಾಡಿದ್ದಕ್ಕೆ ಆಕ್ರೋಶಗೊಂಡ ಸ್ಥಳೀಯರು ಪತಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಪತ್ನಿಗೆ ಪತಿ ಕಿಸ್ ಮಾಡಿದರೆ ಸಾರ್ವಜನಿಕರಿಗೆ ಏನು ತೊಂದರೆ ಅಂತೀರಾ? ಇಲ್ಲೇ ಇರುವುದು ಟ್ವಿಸ್ಟ್.
ಈತ ಕಿಸ್ ಮಾಡಿರುವುದು ಪವಿತ್ರ ಅಯೋಧ್ಯಾ ಘಾಟ್ ನಲ್ಲಿ. ಸ್ನಾನ ಘಟ್ಟದಲ್ಲಿ ಎಲ್ಲರೂ ರಾಮ ನಾಮ ಸ್ಮರಣೆ ಮಾಡುತ್ತಾ ಪವಿತ್ರ ಸ್ನಾನ ಮಾಡುತ್ತಾರೆ. ಆದರೆ ಈ ವ್ಯಕ್ತಿ ಸ್ನಾನ ಮಾಡುವಾಗ ಪತ್ನಿಗೆ ಸಾರ್ವಜನಿಕವಾಗಿ ಕಿಸ್ ಮಾಡಿ ಅಸಭ್ಯವಾಗಿ ವರ್ತಿಸಿದ್ದ.
ಈ ಕಾರಣಕ್ಕೆ ಅಲ್ಲಿದ್ದ ಜನ ಒಟ್ಟಾಗಿ ಈತನಿಗೆ ಥಳಿಸಿದ್ದಾರೆ. ಪಕ್ಕದಲ್ಲಿದ್ದ ಪತ್ನಿ ಪತಿಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.