Publish Date: Wed, 05 Apr 2017 (07:59 IST)
Updated Date: Wed, 05 Apr 2017 (08:09 IST)
ಹೈದರಾಬಾದ್: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತು ಚರ್ಚೆಗಳಾಗುತ್ತಿರುವಾಗಲೇ ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬನನ್ನು ಪೋಸ್ಟ್ ಕಾರ್ಡ್ ಮೂಲಕ ತಲಾಖ್ ನೀಡಿದ್ದಕ್ಕೆ ಬಂಧಿಸಲಾಗಿದೆ.
ಪತ್ನಿಯ ದೂರಿನನ್ವಯ ತೆಲಂಗಾಣ ಪೊಲೀಸರು 38 ವರ್ಷದ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಜವಳಿ ಅಂಗಡಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.
ಮದುವೆಯಾದ ಒಂದೇ ದಿನಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವುದಾಗಿ ನೆಪ ಹೇಳಿ ಮನೆಯಿಂದ ತಪ್ಪಿಸಿಕೊಂಡಿದ್ದ ಹನೀಫ್ ನಂತರ ಕಳೆದ ತಿಂಗಳು ಅಂಚೆ ಮೂಲಕ ತಲಾಖ್ ನೀಡಿದ್ದ. ನಂತರ ತವರು ಮನೆಗೆ ಬಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ