Select Your Language

Notifications

webdunia
webdunia
webdunia
webdunia

ತಮಿಳುನಾಡು ರೈತರಿಗೆ ರಿಲೀಫ್: ರೈತರ ಸಾಲ ಮನ್ನಾಗೆ ಹೈಕೋರ್ಟ್ ಆದೇಶ

ತಮಿಳುನಾಡು ರೈತರಿಗೆ ರಿಲೀಫ್:  ರೈತರ ಸಾಲ ಮನ್ನಾಗೆ ಹೈಕೋರ್ಟ್ ಆದೇಶ
ಚೆನ್ನೈ , ಮಂಗಳವಾರ, 4 ಏಪ್ರಿಲ್ 2017 (20:15 IST)
ತಮಿಳುನಾಡು ರೈತರ ಸಾಲ ಮನ್ನಾ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
 
ಐದು ಎಕರೆ ಹೊಂದಿರುವ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ, ಎಲ್ಲಾ ರೈತರ ಸಾಲ ಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
 
ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಸಾಲ ಮರುಪಾವತಿ ಮಾಡದ ರೈತರ ಮೇಲೆ ದಂಡ ವಿಧಿಸುವುದು ಬೇಡ, ಆಸ್ತಿ ಜಪ್ತಿ ಮಾಡುವುದು ಬೇಡ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
 
ರೈತರ ಸಾಲ ಮನ್ನಾದಿಂದ ಎದುರಾಗುವ ಆರ್ಥಿಕ ಸಂಕಷ್ಟವನ್ನು ಕೇಂದ್ರ ಸರಕಾರ ಹಂಚಿಕೊಳ್ಳಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ. 
 
ರೈತರ ಸಾಲ ಮನ್ನಾದಿಂದಾಗಿ ರಾಜ್ಯ ಸರಕಾರಕ್ಕೆ 1980 ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಪಕ್ಷಾಂತರಿಯಾಗಿದ್ದಾರೆ: ಕಾಗೋಡು ತಿಮ್ಮಪ್ಪ