ಪತ್ನಿಯರನ್ನು ಗೆಳೆಯರೊಂದಿಗೆ ಹಂಚಿಕೊಂಡ ಪತಿ ಮಹಾಶಯರು ಅರೆಸ್ಟ್

Webdunia
ಸೋಮವಾರ, 29 ಏಪ್ರಿಲ್ 2019 (15:35 IST)
ಅಲ್ಫುಜಾ: ನಾಲ್ವರು ಗೆಳೆಯರು ತಮ್ಮ ಪತ್ನಿಯರನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು 25 ರಿಂದ 32 ವರ್ಷ ವಯಸ್ಸಿನವರಾಗಿದ್ದು ಅಲ್ಪುಜಾ ಮತ್ತು ಕೊಲ್ಲಂ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಯಾಮ್‌ಕೂಲಂ ಪೊಲೀಸ್ ಅಧಿಕಾರಿ ಸಿ.ಎಸ್.ಶರೋನ್ ಮಾತನಾಡಿ, 32 ವರ್ಷದ ಆರೋಪಿಯ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
 
ಪತಿ ತನ್ನ ಸಾಮಾಜಿಕ ಜಾಲ ತಾಣದ ಶೇರ್‌ಚಾಟ್ ಗೆಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಾನೆ. ನಾನು ಗೆಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಅವರ ಪತ್ನಿಯರು ನನ್ನದೊಂದಿಗೆ ಲೈಂಗಿಕ ಸುಖ ನೀಡುತ್ತಾರೆ ಎಂದು ಪತಿ ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
 
ನಾನು ಪತಿಯ ಕೋರಿಕೆಯನ್ನು ತಿರಸ್ಕರಿಸಿದಾಗ ವಿಚ್ಚೇದನ ನೀಡುವ ಬೆದರಿಕೆ ಹಾಕಿದ್ದಲ್ಲದೇ ದೈಹಿಕ ಹಿಂಸೆ ನೀಡಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ.
 
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶೇರ್‌ಚಾಟ್‌‌ನಲ್ಲಿ ಆರೋಪಿಗೆ ಕೋಳಿಕ್ಕೋಡ್ ಜಿಲ್ಲೆಯ ನಿವಾಸಿಯ ಪರಿಚಯವಾಗಿತ್ತು. ನಂತರ ಕೋಳಿಕ್ಕೋಡ ನಿವಾಸಿ ಆರೋಪಿಯ ಮನೆಗೆ ಬಂದು ಆತನ ಪತ್ನಿಯೊಂದಿಗೆ ಲೈಂಗಿಕ ಸುಖ ಅನುಭವಿಸಿದ್ದ. ಇತರ ಇಬ್ಬರು ಗೆಳೆಯರು ಕೂಡಾ ತಮ್ಮ ಪತ್ನಿಯರನ್ನು ಅದಲು ಬದಲು ಮಾಡಿ ಲೈಂಗಿಕ ಸುಖ ಅನುಭವಿಸಿದ್ದರು.
 
ಆದರೆ, ಆರೋಪಿಗಳು ಕ್ರೂರತೆಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಅವರ ಪತ್ನಿಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ.
 
ಇದರಿಂದ ಕೋಪಗೊಂಡು ದೈಹಿಕ ಹಿಂಸೆ ನೀಡಲು ಮುಂದಾದಾಗ ಮಹಿಳೆಯರು ಆರೋಪಿ ಪತಿಯಂದಿರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಸೂಕ್ತ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಸಿಎಂ ಬದಲಾವಣೆ ಚರ್ಚೆಯ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಸಿದ್ದರಾಮಯ್ಯ

Womens World Cup: ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸುತ್ತಿರುವ ಭಾರತಕ್ಕೆ ದೊಡ್ಡ ಹೊಡೆತ

ಮುಂದಿನ ಸುದ್ದಿ