Select Your Language

Notifications

webdunia
webdunia
webdunia
webdunia

ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಕಾರಣದ ಕನಸು ಬಿಡಲಿ: ಬಿಜೆಪಿ

ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಕಾರಣದ ಕನಸು ಬಿಡಲಿ: ಬಿಜೆಪಿ
ಕೋಲ್ಕತಾ , ಶನಿವಾರ, 19 ನವೆಂಬರ್ 2016 (15:50 IST)
ಕೇಂದ್ರ ಸರಕಾರದ ನೋಟ್ ಬ್ಯಾನ್ ಆದೇಶ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ ಬಿಜೆಪಿ, ಮಮತಾ ರಾಷ್ಟ್ರ ರಾಜಕಾರಣದ ಕನಸು ಕಾಣುವುದು ಬಿಡಲಿ ಎಂದು ತಿರುಗೇಟು ನೀಡಿದೆ. 
 
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿ. ನೋಟು ನಿಷೇಧ ಕುರಿತಂತೆ ಜೋರಾಗಿ ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸಲಿ. ಇತರ ರಾಜಕೀಯ ಪಕ್ಷಗಳಾದ ಜೆಡಿಯು, ಬಿಜೆಡಿ ಕೇಂದ್ರ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
 
ಭ್ರಷ್ಟಾಚಾರಿಗಳಿಗೆ ಮತ್ತು ಕಪ್ಪು ಹಣ ಹೊಂದಿದವರಿಗೆ 500 ಮತ್ತು 1000 ರೂನೋಟುಗಳ ನಿಷೇಧದಿಂದ ಆತಂಕವಾಗಿದೆ.ಆದರೆ, ಮಮತಾ ಯಾಕೆ ಈ ರೀತಿ ಕೇಂದ್ರ ಸರಕಾರದ ನಿಲುವು ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 
ಪಶ್ಚಿಮ ಬಂಗಾಳ ಜಿಹಾದಿ ಉಗ್ರರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ದುರಾಡಳಿತ ತಾಂಡವವಾಡುತ್ತಿದೆ ಎಂದು  ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾಜಿ ಆತ್ಮಕಥೆ ಹೇಳಲು ಜನ್ಮಗಳೇ ಬೇಕಾಗುತ್ತವೆ: ಸೋನಿಯಾ ಗಾಂಧಿ