Select Your Language

Notifications

webdunia
webdunia
webdunia
webdunia

ಇಂದಿರಾಜಿ ಆತ್ಮಕಥೆ ಹೇಳಲು ಜನ್ಮಗಳೇ ಬೇಕಾಗುತ್ತವೆ: ಸೋನಿಯಾ ಗಾಂಧಿ

ಇಂದಿರಾಜಿ ಆತ್ಮಕಥೆ ಹೇಳಲು ಜನ್ಮಗಳೇ ಬೇಕಾಗುತ್ತವೆ: ಸೋನಿಯಾ ಗಾಂಧಿ
ನವದೆಹಲಿ , ಶನಿವಾರ, 19 ನವೆಂಬರ್ 2016 (15:40 IST)
ದೇಶ ಕಂಡ ಮಹಾನ್ ನಾಯಕಿ, ಮಾಜಿ ಪ್ರದಾನಿ ಇಂದಿರಾ ಗಾಂಧಿಯವರ ಜೀವನ ಕಥೆಯನ್ನು ಹೇಳಲು ಹಲವಾರು ಜನ್ಮಗಳು ಬೇಕಾಗುತ್ತವೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
 
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 100ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ, ನನ್ನ ಅತ್ತೆ ಇಂದಿರಾಜಿಯವರ ಜೀವನ ಕಥೆಯನ್ನು ಸಂಪೂರ್ಣವಾಗಿ ತಿಳಿಸಲು ಹಲವು ಬಾರಿ ಜನ್ಮವೆತ್ತಬೇಕಾಗುತ್ತದೆ ಎಂದರು.
 
ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಕಮಲಾ ನೆಹರು ಅವರ ಪುತ್ರಿಯಾದ ಇಂದಿರಾ ಗಾಂಧಿ ಅಲಹಾಬಾದ್‌ನಲ್ಲಿ ನವೆಂಬರ್ 19, 1917ರಲ್ಲಿ ಜನಿಸಿದ್ದರು. 
 
ಇಂದಿರಾಜಿ 1966 ರಿಂದ 1977 ರವರೆಗೆ ದೇಶದ ಪ್ರಧಾನಿಯಾಗಿ ಸೇವೆಸಲ್ಲಿಸಿದ್ದರು. ನಂತರ 1980 ರಿಂದ ಹತ್ಯೆಯಾಗುವವರೆಗೆ ದೇಶದ ಪ್ರಧಾನಿಯಾಗಿದ್ದರು.
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉ.ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ: ಕಾಂಗ್ರೆಸ್