Select Your Language

Notifications

webdunia
webdunia
webdunia
webdunia

ಮೋದಿ ದೊಡ್ಡ ಮತಗಳ್ಳ, ಅವರನ್ನು ಓಡಿಸಬೇಕು ಎಂದ ಮಲ್ಲಿಕಾರ್ಜುನ ಖರ್ಗೆ: ನೆಟ್ಟಿಗರ ಪ್ರತಿಕ್ರಿಯೆ ನೋಡಿ

Mallikarjun Kharge

Krishnaveni K

ನವದೆಹಲಿ , ಸೋಮವಾರ, 18 ಆಗಸ್ಟ್ 2025 (09:25 IST)
ನವದೆಹಲಿ: ಮೋದಿ ದೊಡ್ಡ ಮತಗಳ್ಳ. ಮತಗಳ್ಳರನ್ನು ಮೊದಲು ಓಡಿಸಬೇಕು. ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುತ್ತೋ ಅಲ್ಲಿಯವರೆಗೆ ಸಂವಿಧಾನ ಸುರಕ್ಷಿತವಾಗಿರಲ್ಲ, ಜನರ ಹಕ್ಕೂ ಸುರಕ್ಷಿತವಾಗಿರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.

ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಅಧಿಕಾರದಲ್ಲಿರುವವರೆಗೂ ಸಂವಿಧಾನಕ್ಕೆ ಅಪಾಯ ತಪ್ಪಿದ್ದಲ್ಲ. ಈ ಮತಗಳ್ಳರನ್ನು ಮೊದಲು ಅಧಿಕಾರದಿಂದ ಕೆಳಗಿಳಿಸಬೇಕು ಎಂದಿದ್ದಾರೆ.

ಮೋದಿ ನಿಮ್ಮ ಮತಗಳನ್ನು ಕದಿಯುತ್ತಿದ್ದಾರೆ. ಯುವ ಜನರ ಉದ್ಯೋಗ ಕದಿಯುತ್ತಾರೆ. ಸಣ್ಣ ಉದ್ದಿಮೆದಾರರು, ರೈತರ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ. ಅವರು ದೊಡ್ಡ ಕಳ್ಳ. ಅವರನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದು ಖರ್ಗೆ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಒಂದು ಕಾಲದಲ್ಲಿ ಸಂವಿಧಾನ ಅಮಾನತಿನಲ್ಲಿಟ್ಟವರು ನೀವು. ಈಗ ಬಿಜೆಪಿಯಿಂದ ಸಂವಿಧಾನಕ್ಕೆ ಅಪಮಾನ ಅಂತಿದ್ದೀರಾ? ಎಂದು ವ್ಯಂಗ್ಯ ಮಾಡಿದ್ದಾರೆ. ಹೆಚ್ಚು ಸುಳ್ಳು ಹೇಳ್ಬೇಡಿ, ನಿಮ್ಮ ಮಾತಿನಿಂದ ನಿಮ್ಮ ನಾಯಕರು ಸಂತೋಷವಾಗಿರಬಹುದು. ಆದರೆ ನಿಮ್ಮ ಮಾತನ್ನು ನಾವು ನಂಬಲ್ಲ ಎಂದಿದ್ದಾರೆ. ಮತ್ತೆ ಕೆಲವರು ಸರಿಯಾಗಿ ಹೇಳಿದ್ರಿ ಎಂದು ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣೆಗೆ ಕುಂಕುಮ, ನಾಮ: ಎನ್ ಡಿಎ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿಜಕ್ಕೂ ಯಾರು