Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್

ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (11:26 IST)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೆ ಪ್ರಧಾನಿ ಮೋದಿ ಕಡೆ ದೃಷ್ಟಿ ಬೀರಿದ್ದು ಅವರ ವಿದ್ಯಾರ್ಹತೆಯನ್ನು ಯಾಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗಕ್ಕೆ ಪ್ರಶ್ನಿಸಿದ್ದಾರೆ. 

ಸಾರ್ವಜನಿಕ ಡೊಮೆನ್‌ನಲ್ಲಿ ಪ್ರಧಾನಿ ಅವರ ಪದವಿ ಮಾಹಿತಿಯನ್ನು ಹಾಕಲು ನೀವು ನಿರಾಕರಿಸಿದ್ದಿರಿ ಎಂದು ನನಗೆ ತಿಳಿದು ಬಂದಿದೆ. ನನ್ನ ಬಗೆಗಿನ ಮಾಹಿತಿಯನ್ನು ಬಹಿರಂಗ ಪಡಿಸಿದರೆ ನನಗೇನು ಸಮಸ್ಯೆ ಇಲ್ಲ. ಹಾಗೆಯೇ ಪ್ರಧಾನಿ ಅವರದ್ದು ಸಹ ಬಹಿರಂಗ ಪಡಿಸಿ. ಈ ದೇಶದ ಜನರು ಅದನ್ನು ತಿಳಿದುಕೊಳ್ಳಲು ಬಯಸಿದ್ದಾರೆ ಎಂದು ಕೇಜ್ರಿವಾಲ್ ಸಿಐಸಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 
 
ಧೈರ್ಯವನ್ನು ತೋರಿಸಿ ದಾಖಲೆಗಳನ್ನು ಬಹಿರಂಗ ಪಡಿಸಿ ಎಂದು ಕೇಜ್ರಿವಾಲ್ ಸಿಐಸಿಗೆ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ 5 ರಂದು ಸೋನಿಯಾ, ಕರುಣಾನಿಧಿ ಬೃಹತ್ ಪ್ರಚಾರ ಮೆರವಣಿಗೆ