Select Your Language

Notifications

webdunia
webdunia
webdunia
webdunia

ಮೇ 5 ರಂದು ಸೋನಿಯಾ, ಕರುಣಾನಿಧಿ ಬೃಹತ್ ಪ್ರಚಾರ ಮೆರವಣಿಗೆ

ಮೇ 5 ರಂದು ಸೋನಿಯಾ, ಕರುಣಾನಿಧಿ ಬೃಹತ್ ಪ್ರಚಾರ ಮೆರವಣಿಗೆ
ಚೆನ್ನೈ , ಶುಕ್ರವಾರ, 29 ಏಪ್ರಿಲ್ 2016 (10:54 IST)
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಡಿಎಂಕೆ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಚೆನ್ನೈನಲ್ಲಿ ಮೇ 5 ರಂದು ಬೃಹತ್ ಮೆರವಣಿಗೆಯನ್ನು ಆಯೋಜಿಸಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಡಿಎಂಕೆ ಅಧ್ಯಕ್ಷ ಎಮ್. ಕರುಣಾನಿಧಿ ಈ ಸಭೆಯಲ್ಲಿ ಭಾಗವಹಿಸಲಿದ್ದು ತಮ್ಮ ಅಭ್ಯರ್ಥಿಗಳಿಗಾಗಿ ಮತಯಾಚನೆ ಮಾಡಲಿದ್ದಾರೆ. 

ನಗರದ ಐಲೆಂಡ್ ಗ್ರೌಂಡ್ಸ್‌ನಲ್ಲಿ ಈ ಪ್ರಚಾರ ಮೆರವಣಿಗೆಯನ್ನು ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇವಿಕೆಎಸ್ ಎಳಂಗೋವನ್ ತಿಳಿಸಿದ್ದಾರೆ (ಎಐಡಿಎಂಕೆ ನಾಯಕಿ, ಮುಖ್ಯಮಂತ್ರಿ ಜೆ. ಜಯಲಲಿತಾ ಸಹ ಇದೇ ಸ್ಥಳದಿಂದ ಪ್ರಚಾರವನ್ನು ಆರಂಭಿಸಿದ್ದರು)
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಆದರೆ ಅವರು ಸಹ ತಮಿಳುನಾಡಿಗೆ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದು ಡಿಎಂಕೆ ಖಜಾಂಚಿ  ಎಂ.ಕೆ ಸ್ಟಾಲಿನ್ ಒಡಗೂಡಿ ಮತಯಾಚನೆ ಮಾಡಲಿದ್ದಾರೆ. ದಿನಾಂಕ ಮತ್ತು ಸಮಯವನ್ನು ಸದಸ್ಯದಲ್ಲಿಯೇ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ಲೈವ್‌ ಶೋದಲ್ಲಿ ಸಚಿವನ ಮೇಲೆ ಕಲ್ಲು ತೂರಾಟ