ಇಂದು ನಡೆಯಲಿದೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ

ಸೋಮವಾರ, 21 ಅಕ್ಟೋಬರ್ 2019 (09:00 IST)
ನವದೆಹಲಿ : ಇಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದ್ದು, ಜೊತೆಗೆ 18 ರಾಜ್ಯಗಳ  51ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 2 ಲೋಕಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದೆ.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ.


ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸಿಎಂ ದೇವೆಂದ್ರ ಫಡ್ನವೀಸ್, ಸಚಿವೆ ಪಂಕಜಾ ಮುಂಡೆ, ಶಿವಸೇನೆ ಆದಿತ್ಯ ಠಾಕ್ರ, ಕಾಂಗ್ರೆಸ್ ನ ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್ ಇಂದು ಕಣಕ್ಕೀಳಿಯಲಿದ್ದಾರೆ. ಹಾಗೇ ಸಿಎಂ ಮನೋಹರ ಲಾಲ್ ಖಟ್ಟರ್, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಜೆಜೆಪಿ ನಾಯಕ ದುಷ್ಯಂತ ಚೌತಾಲಾ, ಐಎನ್ ಎಲ್ ಡಿ ನಾಯಕ ಅಭಯ್ ಸಿಂಗ್ ಚೌತಾಲಾ ಹರಿಯಾಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೀಳಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್