ಪ್ರಯಾಗ್ ರಾಜ್: ವಸಂತ ಪಂಚಮಿ ನಿಮಿತ್ತ ಇಂದು ಕುಂಭಮೇಳದಲ್ಲಿ ಕೊನೆಯ ಶಾಹಿ ಸ್ನಾನ ನಡೆಯುತ್ತಿದೆ. ನಾಗಸಾಧುಗಳು ಒಟ್ಟಿಗೇ ನಗ್ನರಾಗಿ ಪವಿತ್ರಸ್ನಾನಕ್ಕೆ ಧಮುಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾಕುಂಭಮೇಳದಲ್ಲಿ ನಾಗಸಾಧುಗಳ ಬಗ್ಗೆ ಕುತೂಹಲದಿಂದಲೇ ಹಲವು ತೆರಳುತ್ತಿದ್ದಾರೆ. ಅವರ ಜೀವನ ಶೈಲಿ ಬಗ್ಗೆಯೇ ಎಲ್ಲರಿಗೂ ಕುತೂಹಲವಿರುತ್ತದೆ. ಹೀಗಾಗಿ ಕುಂಭಮೇಳದಲ್ಲಿ ನಾಗಸಾಧುಗಳು ಪ್ರಮುಖ ಆಕರ್ಷಣೆಯಾಗಿದ್ದಾರೆ.
ಸಹಸ್ರ ಸಂಖ್ಯೆಯಲ್ಲಿ ನಾಗಸಾಧುಗಳು ಇಂದು ಪವಿತ್ರ ಗಂಗ ಸ್ನಾನ ಮಾಡಿದ್ದಾರೆ. ವಸಂತ ಪಂಚಮಿ ನಿಮಿತ್ತ ನಾಗಸಾಧುಗಳು ಮೊದಲು ಸ್ನಾನ ಮಾಡಿದ್ದು ಬಳಿಕ ಸಾರ್ವಜನಿಕರಿಗೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿಗೇ ಹರ ಹರ ಮಹದೇವ ಎನ್ನುತ್ತಾ ಗಂಗಾ ನದಿಗೆ ಧುಮುಕಿ ಪುಣ್ಯಸ್ನಾನ ಮಾಡುವ ಅಪರೂಪದ ದೃಶ್ಯ ನೋಡಲು ಸಾಕಷ್ಟು ಜನ ನಿಂತಿದ್ದರು.
ಇನ್ನು, ಇಂದು ಪವಿತ್ರ ಸ್ನಾನ ಮಾಡುವವರ ಮೇಲೆ ಆಕಾಶದಿಂದ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆ ಸುರಿಸಲಾಯಿತು. ವಸಂತ ಪಂಚಮಿ ನಿಮಿತ್ತ ಇಂದು ಕುಂಭಮೇಳದಲ್ಲಿ ವಿಪರೀತ ಜನ ದಟ್ಟಣೆ ಕಂಡುಬಂದಿದೆ. ಮೊನ್ನೆ ನಡೆದ ಕಾಲ್ತುಳಿತ ದುರಂತ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.