ಮಧ್ಯಪ್ರದೇಶ: ವೃದ್ಧಾಶ್ರಮಕ್ಕೆ ಹೋಗುವಂತೆ ಅತ್ತೆಯ ಮೇಲೆ ಸೊಸೆಯೊಬ್ಬಳು ಅಮಾನುಷವಾಗಿ ಹಲ್ಲೆ ಮಾಡಿ, ಎಳೆದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂಧೆ ಕಿ ಛಾವಾನಿಯಲ್ಲಿ ನಡೆದಿದೆ.
ಹರಿದಾಡುತ್ತಿರುವ ವಿಡಿಯೋದಲ್ಲಿ 70 ವರ್ಷದ ಸರಳಾ ಬಾತ್ರಾ ಅವರ ಕೂದಲನ್ನು ಎಳೆದು, ಸೊಸೆ ನೀಲಿಕಾ ಕ್ರೂರವಾಗಿ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು. ಅತ್ತೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ವಿಚಾರಕ್ಕೆ ಸಂಬಂಧ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂಧೆ ಕಿ ಛಾವಾನಿಯಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ, 70 ವರ್ಷದ ಸರಳಾ ಬಾತ್ರಾ ಅವರ ಮೇಲೆ ಅವರ ಸೊಸೆ ನೀಲಿಕಾ ಕ್ರೂರವಾಗಿ ಹಲ್ಲೆ ನಡೆಸಿದ್ದಾಳೆ. ನೀಲಿಕಾ ಅವರ ತಂದೆ ಮತ್ತು ಮಗನಿಗೆ ಕರೆ ಮಾಡಿ, ಗೂಂಡಾಗಳನ್ನು ಕರೆಸಿ ಮತ್ತಷ್ಟು ಹಲ್ಲೆ ನಡೆಸಿದ್ದಾಳೆ.