ಆ ಒಂದು ಕ್ಷಣ ಎಲ್ಲರಿಗೂ ಶಾಕ್ ನೀಡಿದ್ದ ಕರುಣಾನಿಧಿ!

Webdunia
ಸೋಮವಾರ, 30 ಜುಲೈ 2018 (10:12 IST)
ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿನ್ನೆ ರಾತ್ರಿ ಒಂದು ಕ್ಷಣ ವೈದ್ಯರು, ಕುಟುಂಬಸ್ಥರನ್ನೂ ಆತಂಕಕ್ಕೀಡು ಮಾಡಿದರು.

ನಿನ್ನೆ ರಾತ್ರಿ ಕರುಣಾನಿಧಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಇಡೀ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಕರುಣಾನಿಧಿ ಪತ್ನಿ, ಮಕ್ಕಳು ಸೇರಿದಂತೆ, ಡಿಎಂಕೆ ನಾಯಕರು ಆಸ್ಪತ್ರೆಗೆ ಧಾವಿಸಿದ್ದು ನೋಡಿ ಹೊರಗಡೆ ಇದ್ದ ಅಭಿಮಾನಿಗಳಿಗೆ ಏನಾಯಿತೋ ಎಂಬ ಆತಂಕ ಮೂಡಿತು.

ಸ್ವತಃ ತಮಿಳುನಾಡು ಸಿಎಂ ಪಳನಿಸ್ವಾಮಿ ತಮ್ಮ ಕೊಯಂಬತ್ತೂರು ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಯತ್ತ ಧಾವಿಸಿದರು. ಇದೆಲ್ಲದರ ನಡುವೆ ಕರುಣಾನಿಧಿಗೆ ಏನಾಯಿತೋ ಎನ್ನುವ ಆತಂಕ ಜೋರಾಯಿತು.

ಕೊನೆಗೆ ಅವರ ಆರೋಗ್ಯದಲ್ಲಿ ಅರೆ ಕ್ಷಣ ಹಿನ್ನಡೆಯಾದರೂ, ಈಗ ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ ಎಂದು ವೈದ್ಯರು ಹೇಳಿಕೆ ಬಿಡುಗಡೆ ಮಾಡಿದರೂ ಅಭಿಮಾನಿಗಳು ನಂಬಲಿಲ್ಲ. ಕೊನೆಗೆ ಪುತ್ರ ಸ್ಟಾಲಿನ್ ಹೇಳಿಕೆ ನೀಡಿ ಅಭಿಮಾನಿಗಳಿಗೆ ಶಾಂತರಾಗಿರುವಂತೆ ಮನವಿ ಮಾಡಿದರು.

ಇಂದೂ ಕೂಡಾ ಸಾಕಷ್ಟು ರಾಜಕೀಯ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇನ್ನು, ಬೆಂಬಲಿಗರು ಇನ್ನೂ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಪುತ್ರ ಸ್ಟಾಲಿನ್ ಈಗಲೂ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments