ಪ್ರಿಯತಮೆಯ ಹಲ್ಲುಕಿತ್ತು ವಿರೂಪಗೊಳಿಸಿದ ಪಾಗಲ್ ಪ್ರೇಮಿ

Webdunia
ಶನಿವಾರ, 4 ಆಗಸ್ಟ್ 2018 (12:50 IST)
ಅಹಮದಾಬಾದ್: ಪ್ರಿಯತಮೆ ಇನ್ನೊಬ್ಬರ ಕಣ್ಣಿಗೆ ಸುಂದರವಾಗಿ ಕಾಣಬಾರದೆಂದು ಹುಚ್ಚು ಪ್ರೇಮಿಯೊಬ್ಬ ಅವಳ ಮುಂದಿನ ಎರಡು ಹಲ್ಲುಗಳ ಕಿತ್ತ ಘಟನೆಯೊಂದು ನಡೆದಿದೆ.


ಗೀತಾಬೆನ್ (55) ಎಂಬಾಕೆ ಆಟೋ ಚಾಲಕನ ಪ್ರೀತಿಗೆ ಬಿದ್ದು ಗಂಡ, ಮಕ್ಕಳನ್ನು ತೊರೆದು ಆತನ ಜತೆ ವಾಸಿಸುತ್ತಿದ್ದಳು. ಇನ್ನು ಇತನೂ ಕೂಡ ಏನು ಕಡಿಮೆ ಇರಲಿಲ್ಲ. ಆಕೆಯ ಪ್ರಿಯಕರ (57) ಪ್ರಿಯತಮೆಗಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದ.  ಮೊದ ಮೊದಲು ಇಬ್ಬರೂ ತುಂಬಾ ಚೆನ್ನಾಗಿದ್ದರು. ಇತ್ತೀಚೆಗೆ ಯಾಕೋ ಪ್ರಿಯಕರನ ಮನಸ್ಸಿನಲ್ಲಿ ಅನುಮಾನದ ಭೂತ ಮನೆಮಾಡಿಕೊಂಡಿತು. ಅವಳ ಮೇಲಿನ ಅತಿಯಾದ ಪ್ರೀತಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ಗೀತಾಬೆನ್ ಗೆ ಸಾಕಷ್ಟು ಚಿತ್ರಹಿಂಸೆ ನೀಡಲು ಶುರುಮಾಡಿದ್ದ.


ತನ್ನ ಬಿಟ್ಟು ಬೇರೆ ಯಾವ ಗಂಡಸೂ ಅಚಳತ್ತ ಆಕರ್ಷಿತರಾಗಬಾರದು ಎಂದು ಯೋಚಿಸಿ ಆಕೆಯ ಮುಂದಿನ ಎರಡು ಹಲ್ಲುಗಳನ್ನು ಕೀಳಿಸಿ ಅವಳನ್ನು ವಿರೂಪಗೊಳಿಸಿದ್ದಾನೆ. ಎಲ್ಲೂ ಹೋಗಬಾರದು ಎಂದು ತಾಕೀತು ಮಾಡಿದ್ದಾನೆ. ಇದರಿಂದ ಬೇಸತ್ತ ಆಕೆ ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದಳು.


ಆತನ ಜತೆ ಆಟೋರಿಕ್ಷಾದಲ್ಲಿ ಹೋಗುವಾಗ ಬೇಸತ್ತ ಮಹಿಳೆ ಆಟೋದಿಂದ ಕಳಕ್ಕೆ ಹಾರಿದ್ದಾಳೆ. ದಾರಿಹೋಕರೊಬ್ಬರು ಆಕೆಯನ್ನು ರಕ್ಷಿಸಿದ್ದಾರೆ. ಆಪ್ತ ಸಮಾಲೋಚನಯ ನಂತರ ಗೀತಾಬೆನ್ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಮಾಡುವವರಿಗಿಂತ, ಚಾಡಿ ಹೇಳುವವರೆ ಕುಮಾರಸ್ವಾಮಿಗೆ ಪ್ರಿಯ: ಜಿಟಿ ದೇವೇಗೌಡ

ಹಿಂದೂ ವಿರೋಧಿ ಹೇಳಿಕೆ, ಇದೆಲ್ಲ ಅವರುಗಳ ಸೃಷ್ಟಿ: ಮಾಜಿ ಸಚಿವ ಆಂಜನೇಯ ಸ್ಪಷ್ಟನೆ

ದೆಹಲಿ ಸ್ಪೋಟ ಪ್ರಕರಣ: ರೈಲು, ವಿಮಾನ ಪ್ರಯಾಣಿಕರಿಗೆ ಸಲಹೆ ಕೊಟ್ಟ ದೆಹಲಿ ಪೊಲೀಸರು

Delhi Blast: ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ನ ಪತ್ನಿಯೊಂದಿಗೆ ಶಾಹೀನ ಲಿಂಕ್

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ರೈತರ ಬದುಕನ್ನು ಕಷ್ಟವಾಗಿಸಿದೆ: ಪ್ರಹ್ಲಾದ್ ಜೋಶಿ

ಮುಂದಿನ ಸುದ್ದಿ
Show comments