Webdunia - Bharat's app for daily news and videos

Install App

ಕಾರಿಗೆ ಢಿಕ್ಕಿ ಹೊಡೆದಿದ್ದಕ್ಕೆ ಸಾರ್ವಜನಿಕರು ದಾಳಿ ಮಾಡಲು ಮುಂದಾದಾಗ ಲಾರಿ ಚಾಲಕ ಮಾಡಿದ ಕೆಲಸಕ್ಕೆ ಎಲ್ಲರೂ ಪರಾರಿ Video

ಕೃಷ್ಣವೇಣಿ ಕೆ
ಮಂಗಳವಾರ, 16 ಜೂನ್ 2026 (10:54 IST)
Photo Credit: X
ಕಾರಿಗೆ ಢಿಕ್ಕಿ ಹೊಡೆಯಿತೆಂದು ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದಾಗ ಆತ ಮಾಡಿದ ಕೆಲಸಕ್ಕೆ ಅಲ್ಲಿದ್ದವರೆಲ್ಲಾ ಪರಾರಿಯಾಗಿದ್ದಾರೆ.

ಸರ್ದಾರ್ ಜಿಗಳು ಎಂದರೆ ಧೈರ್ಯವಂತರು, ಸಾಹಸಿಗಳು ಎಂದೇ ಪರಿಗಣಿಸಲಾಗುತ್ತದೆ. ತಮ್ಮ ವಿರುದ್ಧ ಕೋಲು ಎತ್ತಿದರೆ ಕತ್ತಿ ತೋರಿಸುವ ಶೂರರು. ಆದರೆ ಇಲ್ಲಿ ರಸ್ತೆಯಲ್ಲಿ ಈ ಲಾರಿ ಚಾಲಕ ಸರ್ದಾರ್ ಜಿ ಮಾಡಿದ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನ ನಿಬಿಡ ರಸ್ತೆಯಲ್ಲಿ ಕಾರಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಎರಡೂ ವಾಹನಗಳ ಚಾಲಕರ ನಡುವೆ ನಿನ್ನದೇ ತಪ್ಪು ಎಂದು ವಾಗ್ವಾದವಾಗುವುದು ಸಹಜ. ಆದರೆ ಇಲ್ಲಿ ಕಾರಿನ ಪರ ನಿಂತಿದ್ದ ಕೆಲವರ ಗುಂಪು ಲಾರಿಗೆ ದೊಣ್ಣೆ ಹಿಡಿದು ಹೊಡೆದು ಚಾಲಕನನ್ನು ಹೊರಗೆ ಬಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಈ ವೇಳೆ ಇದ್ದಕ್ಕಿದ್ದಂತೆ ಡ್ರೈವರ್ ಸೀಟ್ ನಿಂದ ಎದ್ದು ಬಂದ ಸರ್ದಾರ್ ಜಿ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಬೀಸುತ್ತಾ ಜನರತ್ತ ಬಂದಿದ್ದಾರೆ. ಆತನ ಕೈಯಲ್ಲಿ ಲಾಂಗ್ ನೋಡಿ ಅಲ್ಲಿ ದೊಣ್ಣೆ ಹಿಡಿದುಕೊಂಡು ನಿಂತಿದ್ದವರೆಲ್ಲಾ ಪರಾರಿಯಾಗಿದ್ದಾರೆ. ಸರ್ದಾರ್ ಜಿಯ ಕೃತ್ಯಕ್ಕೆ ಕೆಲವರು ನಕ್ಕರೆ ಮತ್ತೆ ಕೆಲವರು ಈ ರೀತಿ ನಡು ರಸ್ತೆಯಲ್ಲಿ ಲಾಂಗ್ ಹಿಡಿದು ಆಕ್ರಮಣ ಮಾಡಲು ಬರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

pic.twitter.com/XzupvwFANB

 

— Boiled Anda (@AmitLeliSlayer) June 14, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

1.3 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದ ಪಾಕ್‌ ಟಿಕ್‌ಟಾಕ್‌ ಸ್ಟಾರ್‌ ಗುಂಡೇಟಿಗೆ ಬಲಿ, CCTV Video

ಪಡುಬಿದ್ರಿ ಡೇವಿಡ್ ಹತ್ಯೆ ಪ್ರಕರಣ, ಮಹತ್ವದ ಬೆಳವಣಿಗೆ

ಉಡುಪಿ, ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಬಳಕೆ ಪತ್ತೆ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಗಂಡನ ಮನೆಯಿಂದ ಕಿರುಕುಳ, ಮಗುವನ್ನು ಉಸಿರುಗಟ್ಟಿಸಿ ಕೊಂದು ಸಾವಿಗೆ ಶರಣಾದ ಮಹಿಳೆ

ಕ್ಲಾಸ್‌ವರ್ಕ್ ಮಾಡದಕ್ಕೆ ಕೆನ್ನೆಗೆ ಬಾರಿಸಿದ ಶಿಕ್ಷಕಿ, ಆಘಾತಗೊಂಡ ತರಗತಿಯಲ್ಲೇ ಉಸಿರು ಚೆಲ್ಲಿದ ಎಲ್‌ಕೆಜಿ ಬಾಲಕ, CCTV Video

ಮುಂದಿನ ಸುದ್ದಿ
Show comments