Publish Date: Tue, 29 Aug 2023 (09:34 IST)
Updated Date: Tue, 29 Aug 2023 (10:28 IST)
ಕೋಲ್ಕತ್ತಾ : ಡಿಸೆಂಬರ್ನಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.
ಟಿಎಂಸಿ ಯುವ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ದೇಶವು ನಿರಂಕುಶ ಆಡಳಿತವನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್ನಲ್ಲಿ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂದು ನಾನು ಆತಂಕಗೊಂಡಿದ್ದೇನೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಬಿಜೆಪಿ ಈಗಾಗಲೇ ಎಲ್ಲಾ ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಿದೆ. ಯಾವುದೇ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಅವುಗಳನ್ನು ಬಳಸಬಾರದು ಎಂದರು.
ಕೇಸರಿ ಪಕ್ಷವು ಈಗಾಗಲೇ ನಮ್ಮ ದೇಶವನ್ನು ಸಮುದಾಯಗಳ ನಡುವಿನ ವೈರತ್ವದ ರಾಷ್ಟ್ರವಾಗಿ ಪರಿವರ್ತಿಸಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ನಮ್ಮ ದೇಶವನ್ನು ದ್ವೇಷದ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.