ಬಿಹಾರ : ಸರ್ಕಾರದ ಬಹುಮತವನ್ನು ಸಾಬೀತುಪಡಿಸಿ ನಿತೀಶ್ ನೀಡಿದ್ದ ಮನವಿಪತ್ರವನ್ನು ಅಂಗೀಕರಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಆರ್‌ಜೆಡಿಯೊಂದಿಗಿನ ಮೈತ್ರಿ ಸರ್ಕಾರ ಹಾಗೂ ಐಎನ್‌ಡಿಐಎ ಒಕ್ಕೂಟದೊಂದಿಗೆ ಬಾಂಧವ್ಯ ಕಡಿದುಕೊಂಡು ಬಿಜೆಪಿ ಜೊತೆ ಕೈಜೋಡಿಸುತ್ತಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಭಾನುವಾರ ಸಂಜೆ ಐದಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸರ್ಕಾರದ ಬಹುಮತವನ್ನು ಸಾಬೀತುಪಡಿಸಿ ನಿತೀಶ್ ನೀಡಿದ್ದ ಮನವಿಪತ್ರವನ್ನು ಅಂಗೀಕರಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ನಿತೀಶ್ ಕುಮಾರ್ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಯುನ ಇತರೆ ಎಂಟು ಶಾಸಕರೂ ಸಹ ಡಿಸಿಎಂ ಮತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರ ವಿವರ ಹೀಗಿದೆ.
ಸಾಮ್ರಾಟ್ ಚೌದರಿ – ಉಪಮುಖ್ಯಮಂತ್ರಿ (ಬಿಜೆಪಿ)
ವಿಜಯ್ ಸಿನ್ಹಾ – ಉಪಮುಖ್ಯಮಂತ್ರಿ (ಬಿಜೆಪಿ)
ಡಾ, ಪ್ರೇಮ್ ಕುಮಾರ್ - ಸಚಿವ (ಜೆಡಿಯು)
ವಿಜಯ್ ಕುಮಾರ್ ಚೌದರಿ – ಸಚಿವ (ಜೆಡಿಯು)
ಶ್ರವೋನ್ ಕುಮಾರ್ - ಸಚಿವ (ಜೆಡಿಯು)
ಸಂತೋಷ್ ಕುಮಾರ್ ಸುಮನ್ - ಸಚಿವ (ಹಿಂದೂಸ್ಥಾನಿ ಅವಮ್ ಮೋರ್ಚಾ)