Select Your Language

Notifications

webdunia
webdunia
webdunia
webdunia

ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ

ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ
ಪಣಜಿ , ಸೋಮವಾರ, 18 ಸೆಪ್ಟಂಬರ್ 2017 (10:24 IST)
ಪಣಜಿ: ಗೋವಾ ಪ್ರವಾಸ ಮಾಡುವುದೇ ಎಣ್ಣೆ ಹೊಡೆಯೋಕೆ ಎನ್ನುವವರು ಇದ್ದಾರೆ. ಆದರೆ ಇನ್ನು ಮುಂದೆ ಗೋವಾದಲ್ಲಿ ಸಿಕ್ಕ ಸಿಕ್ಕಲ್ಲಿ ಮದ್ಯಪಾನ ಮಾಡಿ ಮತ್ತಿನಲ್ಲಿ ತೂರಾಡುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.


ಕಂಠಪೂರ್ತಿ ಕುಡಿದು ಇತರರಿಗೆ ತೊಂದರೆ ಮಾಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಷೇಧಿಸಲಾಗುವುದು ಎಂದು ಸಿಎಂ ಮನೋಹರ್ ಪರಿಕ್ಕರ್ ಆದೇಶ ಹೊರಡಿಸಿದ್ದಾರೆ.

ಇದಕ್ಕಿಂತ ಮೊದಲು ರಾಜ್ಯ ಸರ್ಕಾರ ಗೋವಾ ಸಮುದ್ರ ತೀರದಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿತ್ತು. ಇದೀಗ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ನಿಷೇಧಿಸಿದೆ. ಆದೇಶ ಉಲ್ಲಂಘಿಸಿ ಸಮಸ್ಯೆ ಉಂಟು ಮಾಡಿದರೆ ಅಂತಹವರನ್ನು ಬಂಧಿಸಲೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಇಲ್ಲಿ ಮದ್ಯಪಾನ ಮಾಡುವವರಿದ್ದರೆ ತಮ್ಮ ಮನೆಯೊಳಗೆ ಅಥವಾ ನಾಲ್ಕು ಗೋಡೆಯ ಮಧ್ಯೆ ಯಾರಿಗೂ ತೊಂದರೆಯಾಗದಂತೆ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟೀಕೆ