Select Your Language

Notifications

webdunia
webdunia
webdunia
webdunia

ಆಧಾರ್ನಂತೆ ಇನ್ಮುಂದೆ ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್; ಏನಿದರ ವಿಶೇಷತೆ?

ಆಧಾರ್ನಂತೆ ಇನ್ಮುಂದೆ ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್; ಏನಿದರ ವಿಶೇಷತೆ?
ನವದೆಹಲಿ , ಮಂಗಳವಾರ, 14 ಸೆಪ್ಟಂಬರ್ 2021 (07:42 IST)
ನವದೆಹಲಿ (ಸೆ. 14) :  ದೇಶದ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಆಧಾರ್ ಕಾರ್ಡ್ನಂತೆ ಇನ್ಮುಂದೆ ವಿಶೇಷ ಆರೋಗ್ಯ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ಈ ವಿಶಿಷ್ಠ ಆರೋಗ್ಯ ಕಾರ್ಡ್ ಅನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಲು ಮಂದಾಗಿದೆ.
Photo Courtesy: Google

ಆಧಾರ್ನಂತೆ ಸಂಪೂರ್ಣವಾಗಿ ಡಿಜಿಟಲ್ ಕಾರ್ಡ್ ಇದಾಗಿದೆ. ಅಲ್ಲದೇ ಇದಕ್ಕೂ ಕೂಡ ಆಧಾರ್ನಂತೆ ನಿರ್ಧಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಕಾರ್ಡ್ನಲ್ಲಿ ನಿಮ್ಮ ಆರೋಗ್ಯದ ಕುರಿತ ಸಂಪೂರ್ಣ ಮಾಹಿತಿ ಇರಲಿದ್ದು, ಈ ಕಾರ್ಡ್ ಮೂಲಕ ವೈದ್ಯರು ನಿಮ್ಮ ಆರೋಗ್ಯದ ದಾಖಲೆಯನ್ನು ತಕ್ಷಣಕ್ಕೆ ತಿಳಿಯಲು ಸಹಾಯ ವಾಗಲಿದೆ.
ಏನಿದರ ವಿಶೇಷತೆ
ಈ ವಿಶಿಷ್ಟ ಕಾರ್ಡ್ ನಲ್ಲಿ ವ್ಯಕ್ತಿಯೊಬ್ಬರ ವೈದ್ಯಕೀಯ ಇತಿಹಾಸದ ಸಂಪೂರ್ಣ ವಿವರ ಒಳಗೊಂಡಿರಲಿದೆ. ಜೊತೆಗೆ ವ್ಯಕ್ತಿಯಿ ಯಾವ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತದೆ.
ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮಾಹಿತಿ ಕಾರ್ಡಿನಲ್ಲಿ
ಈ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ವಿಶಿಷ್ಠ ಆರೋಗ್ಯ ಕಾರ್ಡ್ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳ ಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ
ಈ ಕಾರ್ಡ್ ಮೂಲಕ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.
ವೈದ್ಯರಿಗೂ ಸಹಾಯಕ
ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್ ಅನ್ನು ಈ ಕಾರ್ಡ್ ಮೂಲಕ ಸಿದ್ಧಪಡಿಸುತ್ತದೆ. ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿ ಯ ಸಹಾಯದಿಂದ, ಒಬ್ಬ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಇದರಿಂದ ವೈದ್ಯರಿಗೂ ಕೂಡ ನೆರವಾಗಲಿದೆ. ವ್ಯಕ್ತಿಯ ಹಿಂದಿನ ಆರೋಗ್ಯ ಸ್ಥಿತಿ, ಆತನ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸುಲಭವಾಗಿ ಎಲ್ಲಾ ಮಾಹಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಸರ್ಕಾರವು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ಆಧಾರ್, ಮೊಬೈಲ್ ಸಂಖ್ಯೆ ಕಡ್ಡಾಯ
ವ್ಯಕ್ತಿಯ ಈ ಆರೋಗ್ಯದ ಕಾರ್ಡ್ ಐಡಿಯನ್ನು ಆತನ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ರಚಿಸಲಾಗುವುದು. ಆರೋಗ್ಯ ಕಾರ್ಡ್ಗಳನ್ನು ರಚಿಸಲು ಈ ಎರಡು ದಾಖಲೆಗಳನ್ನು ಪ್ರಮುಖವಾಗಿದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿಕಾರವನ್ನು ರಚಿಸಲಿದ್ದು, ಈ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸುತ್ತದೆ
ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವಾ ಆರೋಗ್ಯ ಪೂರೈಕೆದಾರರು ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಗೆ ಸಂಪರ್ಕಿಸಬಹುದು.
ನಿಮ್ಮ ದಾಖಲೆಗಳನ್ನುhttps://healthid.ndhm.gov.in/ನಲ್ಲಿ ನೋಂದಾಯಿಸುವ ಮೂಲಕ, ನಿಮ್ಮ ಆರೋಗ್ಯ IDಯನ್ನು ಸಹ ನೀವು ರಚಿಸಬಹುದು


Share this Story:

Follow Webdunia kannada

ಮುಂದಿನ ಸುದ್ದಿ

ಸೋಂಕು ಹೆಚ್ಚಾಗುವ ಸಾಧ್ಯತೆ: 2 ಲಕ್ಷ ವೆಂಟಿಲೇಟರ್ ಹಾಸಿಗೆ ಸಿದ್ದಪಡಿಸಿದ ದೆಹಲಿ ಸರ್ಕಾರ