Publish Date: Wed, 25 Jun 2025 (16:41 IST)
Updated Date: Wed, 25 Jun 2025 (16:45 IST)
ನವದೆಹಲಿ: ವ್ಯಕ್ತಿಯೊಬ್ಬ ಚಿರತೆ ಜತೆ ಒಂಟಿಯಾಗಿ ಹೋರಾಟ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದವರಿಗೆ ಎಂಥವರಿಗೂ ಎದೆ ಝಲ್ ಎನಿಸುತ್ತದೆ. ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ವ್ಯಕ್ತಿ, ಧೈರ್ಯ ಕೆಡದೆ ಚಿರತೆ ಜತೆ ಒಂಟಿಯಾಗಿ ಹೋರಾಡುತ್ತಿರುವುದು ಗಮನ ಸೆಳೆದಿದೆ.
ಈ ಘಟನೆ ಲಖಿಂಪುರ ಖೇರಿ ಜಿಲ್ಲೆಯ ಧೌರಹರ ಅರಣ್ಯ ವ್ಯಾಪ್ತಿಯ ಜುಗುನ್‌ಪುರ ಗ್ರಾಮದ ಗೂಡುಗಳಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಗಿರ್ಧಾರಿ ಪೂರ್ವದ ನಿವಾಸಿ ಮಿಹಿಲಾಲ್ (35) ಗೂಡು ಕೆಲಸ ಮಾಡುತ್ತಿದ್ದಾಗ ಚಿಮಣಿಯಲ್ಲಿ ಅಡಗಿಕೊಂಡಿದ್ದ ಚಿರತೆ ಏಕಾಏಕಿ ದಾಳಿ ನಡೆಸಿದೆ.
ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ದಾಳಿಯನ್ನು ಗಮನಿಸಿ ಚಿರತೆ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದರು. ಇದರಿಂದ ಚಿರತೆ ಮಿಹಿಲಾಲ್ ನನ್ನು ಬಿಟ್ಟು ಸಮೀಪದ ಬಾಳೆ ಗದ್ದೆಗೆ ಪಲಾಯನ ಮಾಡಿತು.
ಚಿರತೆ ಇಟ್ಟಿಗೆ ಭಟ್ಟಿಯಲ್ಲಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದೆ ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ನೃಪೇಂದ್ರ ಚತುರ್ವೇದಿ ತಿಳಿಸಿದ್ದಾರೆ.