Select Your Language

Notifications

webdunia
webdunia
webdunia
webdunia

ಭಾರತಕ್ಕೆ ಎಣ್ಣೆ ಆಮದು ಕೊರತೆ!

ಭಾರತಕ್ಕೆ ಎಣ್ಣೆ ಆಮದು  ಕೊರತೆ!
ಮುಂಬೈ , ಸೋಮವಾರ, 4 ಏಪ್ರಿಲ್ 2022 (15:16 IST)
ಮುಂಬೈ : ಮುಂದಿನ ಹಣಕಾಸು ವರ್ಷದಲ್ಲಿ ಭಾರತಕ್ಕೆ  ಸೂರ್ಯಕಾಂತಿ ಎಣ್ಣೆ ಆಮದಿನದಲ್ಲಿ ಶೇ.25ರಷ್ಟುಅಂದರೆ 4- 6 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆಯ ಪೂರೈಕೆಯಲ್ಲಿ ಕೊರತೆಯುಂಟಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಗುರುವಾರ ತಿಳಿಸಿದೆ.

ವಿಶ್ವದ ಅತ್ಯಂತ ದೊಡ್ಡ ಸೂರ್ಯಕಾಂತಿ ಎಣ್ಣೆ ಉತ್ಪಾದನಾ ದೇಶವಾದ ಉಕ್ರೇನ್ ಮೇಲೆ ರಷ್ಯಾ  ದಾಳಿ ನಡೆಸಿರುವ ಕಾರಣ ಈ ಪರಿಸ್ಥಿತಿ ಬಂದೊದಗಿದೆ.

ಭಾರತದಲ್ಲಿ ಪ್ರತಿ ವರ್ಷವು 230-240 ಲಕ್ಷ ಟನ್ ಖಾದ್ಯ ತೈಲ ಬಳಕೆಯಾಗುತ್ತಿದ್ದು, ಇದರಲ್ಲಿ ಸೂರ್ಯಕಾಂತಿ ತೈಲದ ಪಾಲು ಶೇ.10 ರಷ್ಟಿದೆ. ಶೇ.60 ರಷ್ಟುಸೂರ್ಯಕಾಂತಿ ಎಣ್ಣೆಯನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತಕ್ಕೆ ಶೇ.70 ರಷ್ಟುಕಚ್ಚಾ ಸೂರ್ಯಕಾಂತಿ ಎಣ್ಣೆಯು ಉಕ್ರೇನಿನಿಂದ (22-23 ಲಕ್ಷ ಟನ್) ಹಾಗೂ ಶೇ.20 ರಷ್ಟುರಷ್ಯಾದಿಂದ ಆಮದಾಗುತ್ತದೆ. ಉಳಿದ ಶೇ.10 ರಷ್ಟುಭಾಗ ಅಜೆಂರ್ಟೀನಾ ಇನ್ನಿತರ ದೇಶಗಳಿಂದ ಆಮದಾಗುತ್ತದೆ.

ಪ್ರಸ್ತುತ ಉಕ್ರೇನ್ ಯುದ್ಧ ಪೀಡಿತವಾಗಿದ್ದರೆ, ರಷ್ಯಾದ ಮೇಲೆ ವಿವಿಧ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿವೆ. ಇದು ಭಾರತದ ದೇಶೀಯ ಖಾದ್ಯ ತೈಲ ಉತ್ಪಾದನಾ ಯೋಜನೆಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

13 ಜಿಲ್ಲೆಗಳನ್ನು ಉದ್ಘಾಟಿಸಿದ ಜಗನ್