Select Your Language

Notifications

webdunia
webdunia
webdunia
webdunia

ಸಂಸತ್ತಿನಲ್ಲಿ ಸೂಕ್ತ ಚರ್ಚೆ ಕೊರತೆ: ಸಿಜೆಐ ರಮಣ

ಸಂಸತ್ತಿನಲ್ಲಿ ಸೂಕ್ತ ಚರ್ಚೆ ಕೊರತೆ: ಸಿಜೆಐ ರಮಣ
ನವದೆಹಲಿ , ಸೋಮವಾರ, 16 ಆಗಸ್ಟ್ 2021 (13:49 IST)
ನವದೆಹಲಿ(ಆ.16): ಸಂಸತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ನಡೆಯದ ಕಾರಣ, ನೂತನ ಕಾನೂನುಗಳು ಅಸ್ಪಷ್ಟತೆ ಮತ್ತು ಗೊಂದಲಗಳಿಗೆ ಕಾರಣವಾಗುತ್ತಿರುವುದು ದುರದೃಷ್ಟಕರ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮುರ್ತಿ ಎನ್.ವಿ. ರಮಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ನ ಬಾರ್ ಅಸೋಸಿಯೇಶನ್, ನ್ಯಾಯಾಲಯದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ‘ಕಾನೂನುಗಳನ್ನು ರಚಿಸುವ ಸಮಯದಲ್ಲೇ ವಿಸ್ತೃತ ಚರ್ಚೆಗಳು ನಡೆದರೆ, ಕೋರ್ಟ್ಗಳು ಕಾನೂನುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟವನ್ನು ವಕೀಲರು ಮುನ್ನಡೆಸಿದ್ದರು. ಮೊದಲ ಲೋಕಸಭಾ ಸದಸ್ಯರಲ್ಲಿ ಹೆಚ್ಚಿನವರು ವಕೀಲರು ಅಥವಾ ಕಾನೂನಿನ ಬಗ್ಗೆ ಅರಿವು ಇರುವವರಾಗಿದ್ದರು. ನೂತನ ಕಾನೂನು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ವಿವರಿಸಿ ಹೇಳುತ್ತಿದ್ದರು.
ಇಂತಹ ಚರ್ಚೆಗಳು ನ್ಯಾಯಾಲಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಆದರೆ, ಈಗ ನೂತನ ಕಾನೂನು ರಚನೆ ಪ್ರಕ್ರಿಯೆ ವೇಳೆ ಸಂಸತ್ತಿನಲ್ಲಿ ಸರಿಯಾದ ಚರ್ಚೆಗಳೇ ನಡೆಯುತ್ತಿಲ್ಲ. ಯಾವ ಉದ್ದೇಶಕ್ಕಾಗಿ ಕಾನೂನುಗಳನ್ನು ರಚಿಸಲಾಗಿದೆ ಎಂಬುದೇ ನಮಗೆ ಗೊತ್ತಾಗುವುದಿಲ್ಲ. ಇದರಿಂದ ನ್ಯಾಯಾಲಯಳಿಗೆ ಮತ್ತು ಜನರಿಗೆ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಕೊನೆಗೊಂಡ ಸಂಸತ್ತಿನ ಮುಂಗಾರು ಅಧಿವೇಶನ ಸಂಪೂರ್ಣ ಗದ್ದಲದಿಂದ ಕೂಡಿತ್ತು. ಗದ್ದಲದ ಮಧ್ಯೆಯೂ ಯಾವುದೇ ಚರ್ಚೆ ಇಲ್ಲದೇ ಹಲವು ಮಸೂದೆಗಳನ್ನು ಅಂಗೀಕರಿಸಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಸಂಭಾವನೆ ಹೆಚ್ಚಳಕ್ಕೆ ಚಿಂತನೆ