Publish Date: Sun, 17 Oct 2021 (10:48 IST)
Updated Date: Sun, 17 Oct 2021 (10:50 IST)
ಬೆಂಗಳೂರು : ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿ ಡೀಲ್ ಮಾಡಲು ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿ ಒಬ್ಬ ಡೀಲರ್ ಎಂದು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಅ.30ರಂದು ಸಿಂದಗಿ, ಹಾನಗಲ್ ಉಪಚುನಾವಣೆ ವಿಚಾರವಾಗಿ ಅವರು ಮಾತನಾಡಿದ್ದಾರೆ. ದೆಹಲಿಯಿಂದ ಬರ್ತಿದ್ದಂತೆ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಕೆಂಡಕಾರಿದ್ದಾರೆ.
ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮಾಡಿದಷ್ಟು ಒಳ್ಳೇ ಕೆಲಸ ಯಾರು ಮಾಡಲಿಲ್ಲ. ದೇವೇಗೌಡರಿಗೆ ಈಗಲೂ ಅಲ್ಪ ಅಸಂಖ್ಯಾತರ ಬಗ್ಗೆ ಕಾಳಜಿ ಇದೆ. ಅದರಲ್ಲಿ 1 ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಕಾಳಜಿ ಇಲ್ಲ ಎಂದು ಶಾಸಕ ಜಮೀರ್ ಹೇಳಿಕೆ ನೀಡಿದ್ದಾರೆ. 2004ರಿಂದ ಹೆಚ್ಡಿಕೆ ಮುಸ್ಲಿಮರಿಗೆ ಏನು ಮಾಡಿದ್ದಾರೆ? ಜಾಫರ್ ಶರೀಫ್ ಮೊಮ್ಮಗನ ಮೇಲೆ ಅಷ್ಟು ಪ್ರೀತಿ ಇದ್ರೆ, ಮಂಡ್ಯದಲ್ಲಿ ಶರೀಫ್ ಮಗನಿಗೆ ಟಿಕೆಟ್ ಕೊಡಬೆಕಿತ್ತು. ಹಾಸನ, ರಾಮನಗರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವಿತ್ತು. ಗೆಲ್ಲುವ ಅವಕಾಶವಿದ್ದರೂ ಯಾಕೆ ಕುಮಾರಸ್ವಾಮಿ ಟಿಕೆಟ್ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.