Publish Date: Sun, 17 Oct 2021 (10:31 IST)
Updated Date: Sun, 17 Oct 2021 (10:37 IST)
ಹಾವೇರಿ : ಮೋದಿ ವಿರುದ್ಧ ಮಾತಾಡಿದರೆ ದೇಶದ್ರೋಹಿ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹಿ ಅಂತಾರೆ ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜರಿದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಮಾತನಾಡುತ್ತಾ ರಾಜ್ಯ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರು ಚಳವಳಿ ಮಾಡಿದ್ರೆ ಕಾರು ಹರಿಸಿ ಸಾಯಿಸುತ್ತಾರೆ. ಕೇಂದ್ರದ ಮಂತ್ರಿ ಮಗ ಕಾರು ಹರಿಸಿ ರೈತರನ್ನ ಸಾಯಿಸಿದ. ಇವರನ್ನ ಲಜ್ಜೆಗೆಟ್ಟವರು, ಕೊಲೆಗಡುಕರು ಅನ್ನಬೇಕಲ್ವಾ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ನಮ್ಮ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನ ಈಡೇರಿಸಿದಿವಿ. ಆದರೆ ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ಬೊಮ್ಮಾಯಿ ನೀವೇನ್ ಮಾಡಿದ್ರಿ? ನಮ್ಮ ಬಳಿಯೇನೂ ನೋಟ್ ಪ್ರಿಂಟ್ ಹಾಕುವ ಮಷಿನ್ ಇಲ್ಲ. ಆದರೂ ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಹೇರೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.