Select Your Language

Notifications

webdunia
webdunia
webdunia
webdunia

7 ಹೊಸ ರಕ್ಷಣಾ ಕಂಪನಿಗಳು ಮಿಲಿಟರಿ ಪಡೆಗೆ ಶಕ್ತಿ ತುಂಬಲಿದೆ:ನರೇಂದ್ರ ಮೋದಿ

7 ಹೊಸ ರಕ್ಷಣಾ ಕಂಪನಿಗಳು ಮಿಲಿಟರಿ ಪಡೆಗೆ ಶಕ್ತಿ ತುಂಬಲಿದೆ:ನರೇಂದ್ರ ಮೋದಿ
ದೆಹಲಿ , ಶನಿವಾರ, 16 ಅಕ್ಟೋಬರ್ 2021 (07:52 IST)
ದೆಹಲಿ : ವಿಜಯದಶಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆರಂಭದಲ್ಲಿ ರಕ್ಷಣಾ ಸಚಿವಾಲಯದಿಂದ ವಿಸರ್ಜಿಸಲ್ಪಟ್ಟಿದ್ದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ನ (OFB) ಏಳು ಹೊಸ ರಕ್ಷಣಾ ಕಂಪನಿಗಳನ್ನು ಉದ್ಘಾಟಿಸಿದ್ದಾರೆ.

ಕೇಂದ್ರ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿ, 200 ವರ್ಷಗಳ ಹಳೆಯ ಒಎಫ್‌ಬಿಯ ಸ್ವತ್ತುಗಳನ್ನು ಈ ಏಳು ಹೊಸದಾಗಿ ಸ್ಥಾಪಿಸಲಾದ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಾಗಿ (DPSUs) ವಿಂಗಡಿಸಲಾಗಿದೆ. ಅದರ ಸುಮಾರು 70,000 ಉದ್ಯೋಗಿಗಳನ್ನು ಈ ಏಳು ಹೊಸ ಘಟಕಗಳಿಗೆ ಯಾವುದೇ ಬದಲಾವಣೆ ಇಲ್ಲದೆ ವರ್ಗಾಯಿಸಲಾಗಿದೆ. ಈ ಕಂಪನಿಗಳಲ್ಲಿ ಪಿಸ್ತೂಲಿನಿಂದ ಯುದ್ಧ ವಿಮಾನದವರೆಗೆ ತಯಾರಿಸಲಾಗುತ್ತದೆ. ಸರ್ಕಾರದ ಈ ಹೆಜ್ಜೆಯನ್ನು ಆತ್ಮನಿರ್ಭರ್ ಭಾರತ ಅಭಿಯಾನದ ಅಡಿಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ದೊಡ್ಡ ಹೆಜ್ಜೆಯೆಂದು ಪರಿಗಣಿಸಲಾಗಿದೆ.
ವಿಜಯ ದಶಮಿಯ ಸಂದರ್ಭದಲ್ಲಿ ಈ ಕಂಪನಿಗಳ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಹೊಸ ಭವಿಷ್ಯವನ್ನು ನಿರ್ಮಿಸಲು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. 41 ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಪರಿಷ್ಕರಿಸುವ ನಿರ್ಧಾರ ಮತ್ತು ಈ ಏಳು ಕಂಪನಿಗಳ ಆರಂಭವು ಈ ನಿರ್ಣಯದ ಪ್ರಯಾಣದ ಒಂದು ಭಾಗವಾಗಿದೆ. ಈ ನಿರ್ಧಾರವು ಕಳೆದ 15-20 ವರ್ಷಗಳಿಂದ ಬಾಕಿಯಿತ್ತು ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ