ಈ ವಿಷಯವನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಗಮನಕ್ಕೆ ತರಲಾಯಿತು. CISF ಅಧಿಕಾರಿಗಳು KIA ಠಾಣೆಯ ಸಂಬಂಧಪಟ್ಟ ಪೊಲೀಸರಿಗೆ ಅಲರ್ಟ್ ಮಾಡಿದರು.
ತೆಗೆದಿಡಲು ಮರೆತಿದ್ದ ಫಾರೂಕ್
ಈ ಮಧ್ಯೆ, ಶಾಸಕ ಎನ್.ಎ. ಹ್ಯಾರಿಸ್ ಸಂಬಂಧಿ ಫಾರೂಕ್ ತನ್ನ ಶಸ್ತ್ರಾಸ್ತ್ರ ಪರವಾನಗಿಯ ದಾಖಲೆಗಳನ್ನು ತರಿಸುವಲ್ಲಿ ಯಶಸ್ವಿಯಾದರು. ತಾನು ಬುಲೆಟ್‌ಗಳನ್ನು ಆ ಬ್ಯಾಗ್‌ನಲ್ಲೇ ಇಟ್ಟಿದ್ದೆ. ಬೆಳಗ್ಗೆ ಮನೆಯಿಂದ ಹೊರಡುವಾಗ ಆ ಬ್ಯಾಗ್‌ನಿಂದ 2 ಜೀವಂತ ಗುಂಡುಗಳನ್ನು ತೆಗೆದಿಡಲು ಮರೆತುಹೋಯಿತು ಎಂದು ಪೊಲೀಸರು ಹಾಗೂ CISF ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರು.
ಬುಲೆಟ್ ವಶಕ್ಕೆ ಪಡೆದ ಅಧಿಕಾರಿಗಳು
ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಮೂಲಗಳು, ನಾವು ಅವರ ಲೈಸೆನ್ಸ್ ಅನ್ನು ಕ್ರಾಸ್‌ಚೆಕ್ ಮಾಡಿದೆವು ಮತ್ತು ಅದರ ಸತ್ಯಾಸತ್ಯತೆಯನ್ನು ದೃಢೀಕರಿಸಿದ್ದೇವೆ. ಬಳಿಕ, ನಾವು ಅವರಿಗೆ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟೆವು. ಆದರೆ, ಅವರ ಬಳಿಯಿದ್ದ ಬುಲೆಟ್‌ಗಳನ್ನು ಸೀಜ್ ಮಾಡಿದ್ದೇವೆ'' ಎಂದು ತಿಳಿಸಿವೆ.