Select Your Language

Notifications

webdunia
webdunia
webdunia
webdunia

ಮೋದಿ ಫೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ ಈಶ್ವರಪ್ಪ

KS Eshwarappa

Krishnaveni K

ಶಿವಮೊಗ್ಗ , ಶನಿವಾರ, 6 ಏಪ್ರಿಲ್ 2024 (11:48 IST)
ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಇದೀಗ ಮೋದಿ ಫೋಟೋ ಬಳಕೆ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ವೇಳೆ ಈಶ್ವರಪ್ಪ ಮೋದಿ ಭಾವಚಿತ್ರ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ಬಿವೈ ವಿಜಯೇಂದ್ರ ವ್ಯಂಗ್ಯ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ ಮೋದಿ ಅವರ ಅಪ್ಪನ ಮನೆ ಆಸ್ತಿನಾ ಎಂದು ವ್ಯಂಗ್ಯ ಮಾಡಿದ್ದರು.

ಇದೀಗ ಮೋದಿ ಫೋಟೋ ಬಳಕೆಗಾಗಿ ಈಶ್ವರಪ್ಪ ಕೋರ್ಟ್ ಗೆ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಈಶ್ವರಪ್ಪ ಮುನಿಸು ಏನಿದ್ದರೂ ರಾಜ್ಯ ಬಿಜೆಪಿ ನಾಯಕರ ಮೇಲೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ದೂರವಾಣಿ ಕರೆ ಮೂಲಕ ಈಶ್ವರಪ್ಪಗೆ ದೆಹಲಿಗೆ ಬರಲು ಸೂಚಿಸಿದ್ದರು. ಅದರಂತೆ ದೆಹಲಿಗೆ ಹೋಗಿದ್ದರೂ ಅಮಿತ್ ಶಾ ಭೇಟಿಗೆ ಸಿಕ್ಕಿರಲಿಲ್ಲ.

ಹೈಕಮಾಂಡ್ ಮೇಲೆ ಈಶ‍್ವರಪ್ಪಗೆ ಸಂಪೂರ್ಣ ಗೌರವವಿದೆ. ಇದೇ ಕಾರಣಕ್ಕೇ ಅವರು ಮೋದಿ ಫೋಟೋ ಬಳಸಿ ಚುನಾವಣಾ ಪ್ರಚಾರ ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ಅಧಿಕೃತ ಅಭ್ಯರ್ಥಿ ಬಿವೈ ರಾಘವೇಂದ್ರ ಕೆಂಗಣ‍್ಣಿಗೆ ಗುರಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಯಾರು ಅಂತಾನೇ ಗೊತ್ತಿಲ್ಲ: ಬಿವೈ ವಿಜಯೇಂದ್ರ ವ್ಯಂಗ್ಯ