Select Your Language

Notifications

webdunia
webdunia
webdunia
webdunia

ಇಷ್ಟರವರೆಗೆ ಮೋದಿ ತೋರಿಸಿದ್ದು ಕೇವಲ ಟ್ರೈಲರ್: ಬಸನಗೌಡ ಪಾಟೀಲ್ ಯತ್ನಾಳ್

Basanagowda Patil Yathnal
ಉಡುಪಿ: ಮೋದಿ ಸರ್ಕಾರ ಕಳೆದ 10 ವರ್ಷದ ಅವಧಿಯಲ್ಲಿ ತೋರಿಸಿದ್ದು ಕೇವಲ ಟ್ರೈಲರ್, ಇನ್ನು ಮುಂದೆ ಪೂರ್ತಿ ಸಿನಿಮಾ ನೋಡಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರ ಸಾಧನೆಯನ್ನು ಹೊಗಳುತ್ತಾ ಕಾಂಗ್ರೆಸ್ ಪರ ಟೀಕಾಪ್ರಹಾರ ನಡೆಸಿದ್ದಾರೆ. 50 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಮಾಡಬಾರದ ಹಗರಣಗಳನ್ನೆಲ್ಲಾ ಮಾಡಿದೆ. ಪ್ರಧಾನಿ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ನೋಡಿದ್ದು ಕೇವಲ ಟ್ರೈಲರ್. ಇನ್ನು ಮುಂದಿನ 5 ವರ್ಷದಲ್ಲಿ ಪೂರ್ತಿ ಸಿನಿಮಾ ನೋಡಲಿದ್ದೀರಿ ಎಂದಿದ್ದಾರೆ.

ಕಾಂಗ್ರೆಸ್ ‍ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಯತ್ನಾಳ್, 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿ ಕೇವಲ 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಇದನ್ನು ವಿಧಾನಸಭೆಯಲ್ಲೇ ಪ್ರಶ್ನಿಸಿದ್ದೇನೆ. ನುಡಿದಂತೆ ಎಲ್ಲಿ ನಡೆದಿದ್ದೀರಿ ಎಂದು ಪ್ರಶ್ನಿಸಿರುವುದಾಗಿ ಯತ್ನಾಳ್ ಹೇಳಿದ್ದಾರೆ.

ಮೋದಿ ಸರ್ಕಾರ 15 ಲಕ್ಷ ಎಲ್ಲಿ ಕೊಟ್ಟಿದೆ ಎಂದು ಕೇಳುತ್ತಾರೆ. ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ಆಸ್ತಿ ಮಾರಿದರೆ ಪ್ರತಿಯೊಬ್ಬರಿಗೂ 15 ಲಕ್ಷ ಸಿಗಲಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ನ್ಯಾಯಪೀಠದ ಮುಂದೆಯೇ ಕತ್ತುಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ