ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ತೊಟ್ಟುಕೊಳ್ಳುತ್ತಿರುವ ಶೂ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.
ರಾಹುಲ್ ಗಾಂಧಿ ಸದಾ ಬಿಳಿ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟುಕೊಳ್ಳುತ್ತಾರೆ. ಈ ಟಿ ಶರ್ಟ್ ಕೂಡಾ ದುಬಾರಿ ಬೆಲೆಯದ್ದೇ ಎಂದು ಕೆಲವರು ಪತ್ತೆ ಮಾಡಿದ್ದರು. ಇದೀಗ ಮೊನ್ನೆಯಿಂದ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಭಟನೆ ನಡೆಸುವ ಸಲುವಾಗಿ ರಾಹುಲ್ ನೀಲಿ ಬಣ್ಣದ ಟಿ ಶರ್ಟ್ ತೊಡುತ್ತಿದ್ದಾರೆ.
Photo Credit: X
ಇದರ ಜೊತೆಗೆ ಅವರು ಇತ್ತೀಚೆಗೆ ಒಂದು ಶೂ ತೊಡುತ್ತಿದ್ದಾರೆ. ಈ ಶೂ ಬೆಲೆ ಬರೋಬ್ಬರಿ 3 ಲಕ್ಷ ರೂ. ಇದೆ ಎಂದು ನೆಟ್ಟಿಗರು ಪತ್ತೆ ಮಾಡಿದ್ದಾರೆ. ಕ್ಲೌಡ್ 5 ವಾಟರ್ ಪ್ರೂಫ್ ಶೂ ಇದಾಗಿದ್ದು ಇದಕ್ಕೆ ಆನ್ ಲೈನ್ ನಲ್ಲಿ 3 ಲಕ್ಷ ರೂ. ಬೆಲೆಯಿರುವುದು ಪತ್ತೆಯಾಗಿದೆ.
ಇದರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಮೇಲಿನಿಂದ ಸಿಂಪಲ್ ಆಗಿ ಇರುತ್ತೇನೆ ಎನ್ನುವ ರಾಹುಲ್ ಗಾಂಧಿ ನಿಜವಾದ ರೂಪ ಇದು. ಅವರ ಟಿ ಶರ್ಟ್ ಇರಲಿ, ಶೂ ಇರಲಿ ಎಲ್ಲವೂ ದುಬಾರಿ ಬೆಲೆಯ ಬ್ರ್ಯಾಂಡೆಡ್ ಗಳೇ ಆಗಿರುತ್ತವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.