Webdunia - Bharat's app for daily news and videos

Install App

ಮದುವೆಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ: 5 ಮಂದಿ ದುರ್ಮರಣ, 27 ಮಂದಿಗೆ ಗಾಯ

Sampriya
ಶುಕ್ರವಾರ, 20 ಡಿಸೆಂಬರ್ 2024 (19:11 IST)
ರಾಯಗಢ: ಕುಟುಂಬ ಸಮೇತ ಮದುವೆ ತೆರಳಿದ್ದ ಖಾಸಗಿ ಬಸ್ ಪಲ್ಟಿಯಾಗಿ 5 ಜನ ಸಾವನ್ನಪ್ಪಿ, 27 ಜನ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.

ಮೃತರನ್ನು ಸಂಗೀತಾ ಜಾಧವ್, ಗೌರವ್ ದಾರಾಡೆ, ಶಿಲ್ಪಾ ಪವಾರ್, ವಂದನಾ ಜಾಧವ್ ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ಮಾತನಾಡಿ, ಇಂದು (ಡಿ.20) ಬೆಳಿಗ್ಗೆ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಮದುವೆಗಾಗಿ ಖಾಸಗಿ ಬಸ್ (ಪರ್ಪಲ್ ಟ್ರಾವೆಲ್ಸ್)ನಲ್ಲಿ ಪುಣೆಯ ಲೋಹೆಗಾಂವ್‌ನಿಂದ ಮಹಾಡ್‌ನ ಬಿರ್ವಾಡಿಗೆ ಹೊರಟಿದ್ದರು. ಈ ವೇಳೆ ತಮ್ಹಿನಿ ಘಾಟ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ಕಮರಿಗೆ ಉರುಳಿದೆ ಎಂದರು.

ಘಟನಾ ಸ್ಥಳಕ್ಕೆ ಮಾಂಗಾವ್ ಪೊಲೀಸ್ ಠಾಣೆಯ ತಂಡ ಆಗಮಿಸಿ ಗಾಯಗೊಂಡವರನ್ನು ಮಾಂಗಾವ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ. ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments