ಬೆಂಗಳೂರು: ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರನ ಸಂಬಂಧ ಪತ್ನಿ ಮತ್ತು ಕುಟುಂಬದವರು ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಅವರ ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದಲ್ಲದೆ ಅತುಲ್ ಸುಭಾಷ್ ಮಗನನ್ನು ತಮ್ಮ ಜವಾಬ್ದಾರಿಗೆ ಒಪ್ಪಿಸಬೇಕೆಂಧು ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಅತುಲ್ ಸುಭಾಷ್ ತಾಯಿ ಹೇಬಿಯಸ್ ಕಾರ್ಪಸ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿರುವ ತನ್ನ ನಿವಾಸದಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ನಂತರ ಪುತ್ರನ ಬಗ್ಗೆ ಯಾವುದೇ ವಿಚಾರ ಮುನ್ನೆಲೆಗೆ ಬಂದಿರ್ಲಿಲ್ಲ. ಪ್ರಕರಣ ಸಂಬಂಧ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧಿಸಿದ ನಂತರವೂ ಮಗು ಎಲ್ಲಿದೆ ಎಂಬುದು ತಿಳಿದಿಲ್ಲ.
ಮನವಿಯಲ್ಲಿ ತನ್ನ ಮೊಮ್ಮಗನನ್ನು ನಮಗೆ ಹಸ್ತಾಂತರಿಸಬೇಕು. ಇದುವರೆಗೂ ಮಗು ಎಲ್ಲಿದೆ ಎಂಬುದು ತಿಳಿದಿಲ್ಲ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣದಲ್ಲಿ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಸಹೋದರ ಮತ್ತು ತಾಯಿಯನ್ನು ಬಂಧಿಸಿದ ನಂತರ ಇದು ಸಂಭವಿಸಿದೆ.
ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಅಪ್‌ಡೇಟ್‌ನಲ್ಲಿ, ಅತುಲ್ ಸುಭಾಷ್ ಅವರ ತಾಯಿ ತನ್ನ ಮಗನಿಗೆ ನ್ಯಾಯ ಕೋರಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಲ್ಲಿಸಿದ PIL ನಲ್ಲಿ ಈ ಕೆಳಗಿನ ವಿನಂತಿಗಳನ್ನು ಮಾಡಲಾಗಿದೆ.