ನವದೆಹಲಿ: ಮನೆಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ತಾಯಿ ಮತ್ತು ಮಗನನ್ನು ಹತ್ಯ ನಡೆಸಿರುವ ಭಟನೆ ದೆಹಲಿಯ ಲಜ್‌ಪತ್ ನಗರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
24 ವರ್ಷದ ಮುಖೇಶ್ ಬಂಧಿತ ಆರೋಪಿಯಾಗಿದ್ದಾನೆ. ತಾಯಿ ರುಚಿಕಾ (42) ಹಾಗೂ ಮಗ ಕ್ರಿಶ್ (14) ಕೊಲೆಯಾದ ದುದೈವಿಗಳು. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರುಚಿಕಾ ಮತ್ತು ಕುಲದೀಪ್ ದಂಪತಿಯು ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಮುಖೇಶ್ ಚಾಲಕ ಹಾಗೂ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕೊಲೆ ನಡೆದ ದಿನ ಮುಖೇಶ್‌ಗೆ ರುಚಿಕಾ ಬೈದಿದ್ದಳು ಎನ್ನಲಾಗಿದ್ದು, ಇದೇ ಕೋಪದಿಂದ ಆಕೆ ಹಾಗೂ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬುಧವಾರ ರಾತ್ರಿ ಕೊಲೆ ಪ್ರಕರಣ ಪೊಲೀಸರಿಗೆ ಮಾಹಿತಿ ಸಿಕ್ಕಿದೆ., ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪತ್ನಿ ರುಚಿತಾಳ ಮೃತದೇಹ ಬೆಡ್‌ರೂಮ್‌ನಲ್ಲಿ ಹಾಗೂ ಮಗನ ಮೃತದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.