ಎಣ್ಣೆ ಕುಡಿಯಲು ಹಣ ಕೊಟ್ಟಿಲ್ಲವೆಂದು ಗರ್ಭಿಣಿ ಪತ್ನಿಯನ್ನು ಕೊಂದ!

Webdunia
ಭಾನುವಾರ, 16 ಜನವರಿ 2022 (10:31 IST)
ರಾಂಚಿ : ಮದ್ಯ ಖರೀದಿಸಲು ಹಣ ಕೊಡದ ಗರ್ಭಿಣಿ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದಿರುವ ಘಟನೆ ಜಾರ್ಖಂಡ್ನ ಛತ್ರಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

ಪ್ರಿಯಾ ದೇವಿ ಮೃತಳಾಗಿದ್ದಾಳೆ. ತಿಲೇಶ್ವರ ಗಂಜು ಆರೋಪಿ ಪತಿಯಾಗಿದ್ದಾನೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿಯನ್ನು ಮದುವೆಯಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. 

ಕಂಠ ಪೂರ್ತಿ ಕುಡಿದು ಬರುತ್ತಿದ್ದ ತಲೇಶ್ವರ ಪ್ರಿಯಾ ಗರ್ಭಿಣಿ ಎನ್ನುವುದು ಲೆಕ್ಕಿಸದೇ ಹೊಡೆದು ಹಿಂಸೆ ಮಾಡುತ್ತಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಪ್ರಿಯಾ ಪ್ರಾಣವನ್ನು ತೆಗೆದಿದೆ. 

ಒಂದು ದಿನ ತಿಲೇಶ್ವರ ಪತ್ನಿ ಬಳಿ ಮದ್ಯ ಖರೀದಿ ಮಾಡಲು ಹಣ ಕೇಳಿದ್ದಾನೆ. ಆದರೆ ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಮನಬಂದಂತೆ ಆಕೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ. ಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಡೆಹ್ರಾಡೂನ್‌ನಲ್ಲಿ ಮೂರು ಆಭರಣ ಬಿಟ್ಟು ಬೇರೆ ಧರಿಸಿದ್ರೆ ಬೀಳುತ್ತೆ ₹50ಸಾವಿರ ದಂಡ

ಬಿಜೆಪಿ ಶಾಸಕ ರವಿಕುಮಾರ್ ಸಿಎಂ ಕಾರಿನಲ್ಲಿ ಇದ್ದಿದ್ದು ಯಾಕೆ: ನಿಜ ಕಾರಣ ಬಯಲು

ಮುಂದಿನ ಸುದ್ದಿ
Show comments