Publish Date: Sun, 30 Oct 2022 (14:19 IST)
Updated Date: Sun, 30 Oct 2022 (14:21 IST)
ಚೆನ್ನೈ : ಪರೀಕ್ಷೆ ಬರೆಯುವುದನ್ನು ತಪ್ಪಿಸಿಕೊಳ್ಳಲು ತನ್ನನ್ನು ತಾನು ಕಿಡ್ನ್ಯಾಪ್ ಮಾಡಿಕೊಳ್ಳಲು ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಕಿಲ್ಪಾಕ್ ಶಾಲೆಯ 12 ವರ್ಷದ ಬಾಲಕ ಪರೀಕ್ಷೆಗೆ ಹೋಗುವುದಿಲ್ಲ ಎಂದು ತನ್ನ ಪೋಷಕರಿಗೆ ಮನವಿ ಮಾಡಿದ್ದ. ಆದರೆ ಆತನ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ನಾಟಕವನ್ನು ಆಡಿದ್ದಾನೆ.
ಘಟನೆಗೆ ಸಂಬಂಧಿಸಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಆ ಬಾಲಕ ತಾನಾಗೇ ಮನೆಗೆ ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದ್ದಾರೆ.