Select Your Language

Notifications

webdunia
webdunia
webdunia
webdunia

ಕೇರಳದ ವಯನಾಡಿನಲ್ಲಿ ಭೂ ಕುಸಿತ ಮತ್ತು ತ್ರಿಶ್ಶೂರ್ ಡ್ಯಾಮ್ ನ ಭಯಾನಕ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ

Wayanad landslide video

Krishnaveni K

ವಯನಾಡು , ಮಂಗಳವಾರ, 30 ಜುಲೈ 2024 (15:12 IST)
ವಯನಾಡು: ಕೇರಳದ ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ ಏರುತ್ತಲೇ ಇದೆ. ಸಾಕಷ್ಟು ಜನ ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
 

ಸಾವಿನ ಸಂಖ್ಯೆ ಇದೀಗ ಬಂದ ವರದಿ ಪ್ರಕಾರ 49 ಕ್ಕೇರಿದೆ. ಈಗಾಗಲೇ ಪರಿಹಾರ ಕಾರ್ಯ ಭರದಿಂದ ಸಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಸ್ಥಳದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಯೇ ತಲೆನೋವಾಗಿದೆ.

 
ಇದಲ್ಲದೆ, ಕೇರಳದಲ್ಲೂ ಬಹುತೇಕ ಡ್ಯಾಮ್ ಗಳು ಭರ್ತಿಯಾಗಿದ್ದು, ಜನರು ಭೀತಿಯಲ್ಲಿರುವಂತಾಗಿದೆ. ತ್ರಿಶ್ಶೂರ್ ನ ಪೀಚಿ ಡ್ಯಾಮ್ ನಲ್ಲಿ ನೀರು ಧುಮ್ಮಿಕ್ಕಿ ಹರಿದು ರುದ್ರರಮಣೀಯ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ವೈರಲ್ ವಿಡಿಯೋಗಳು ಇಲ್ಲಿವೆ .ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಶಿರಾಡಿ ಘಾಟಿಯಲ್ಲಿ ಮತ್ತೆ ಭಾರೀ ಭೂ ಕುಸಿತ: ವಾಹನಗಳು ಓಡಾಡುತ್ತಾ ಎನ್ನುವ ಅನನುಮಾನಕ್ಕೆ ಇಲ್ಲಿದೆ ಉತ್ತರ