Publish Date: Mon, 31 Oct 2022 (13:56 IST)
Updated Date: Mon, 31 Oct 2022 (13:58 IST)
ತಿರುವನಂತಪುರಂ : ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಐದು ಗಂಟೆಗಳ ಕಾಲ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಾಟ್ಟು ಮೆರವಣಿಗೆಗೆ ನಡೆಯುವ ಹಿನ್ನೆಲೆಯಲ್ಲಿ ನ.1ರಂದು ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ತಿಳಿಸಿದೆ.
ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ವೇ ಮೂಲಕ ಪದ್ಮನಾಭ ಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆ ನಡೆಯಲಿದೆ.
ಇದು ಶತಮಾನಗಳ ಹಿಂದಿನಿಂದ ನಡೆದು ಬಂದ ಆಚರಣೆ ಆಗಿದ್ದು, ಸುಗಮವಾಗಿ ಮುಂದುವರಿಸಲು ನ. 1ರಂದು 5 ಗಂಟೆಗಳ ಕಾಲ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ.